ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್’ಗಢದಲ್ಲಿ ಬಿಜೆಪಿ ಮುನ್ನಡೆ: ಕಮಲ ಪಾಳಯದಲ್ಲಿ ಸಂಭ್ರಮ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರು, ಡಿಸೆಂಬರ್ 03, 2023 (www.justkannada.in): ಛತ್ತೀಸ್ ಗಢದಲ್ಲಿ ಇದೀಗ ಬಿಜೆಪಿ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಮುನ್ನಡೆ 40 ಸ್ಥಾನಗಳಿಗೆ ಕುಸಿದಿದೆ.

ರಾಜಸ್ಥಾನ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ. ರಾಜಸ್ಥಾನದ 199 ಕ್ಷೇತ್ರಗಳಲ್ಲಿ ಇದೀಗ ಬಿಜೆಪಿಯು 107 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಕಾಂಗ್ರೆಸ್ 76ಕ್ಕೆ ಕುಸಿದಿದೆ. ಇತರರು 16 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. 227 ಕ್ಷೇತ್ರಗಳ ಮತ ಎಣಿಕೆಯಲ್ಲಿ 136 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ 91 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ರಾಜಸ್ಥಾನದ 198 ಕ್ಷೇತ್ರಗಳ ಮತಎಣಿಕೆಯಲ್ಲಿ ಬಿಜೆಪಿ 109 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 87 ಸ್ಥಾನಗಳಲ್ಲಿ ಮತ್ತು ಇತರರು 2 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ 66 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಸರಳ ಬಹುಮತಕ್ಕೆ 60 ಸ್ಥಾನಗಳ ಅಗತ್ಯವಿದೆ. ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್ 41 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

Font Awesome Icons

Leave a Reply

Your email address will not be published. Required fields are marked *