ರಾಜ್ಯದಲ್ಲಿ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಕರೆ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ಬೆಂಗಳೂರು,ಮಾರ್ಚ್,14,2024(www.justkannada.in):  ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಒಳ್ಳೆಯ ಬಹುಮತದಿಂದ ಗೆಲ್ಲಿಸಬೇಕು ಎಂದು ರಾಜ್ಯದ ಜನತೆಯನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಮನವಿ ಮಾಡಿದರು.

ಮೈತ್ರಿಕೂಟದಲ್ಲಿ ಕೋಲಾರ, ಮಂಡ್ಯ, ಹಾಸನ ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಟ್ಟಿದ್ದಾರೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಜನತೆಯ ಬಳಿ ಹೆಚ್.ಡಿ ದೇವೇಗೌಡರು ವಿನಂತಿ ಮಾಡಿಕೊಂಡರು

ಡಾ.ಸಿಎನ್ ಮಂಜುನಾಥ್ ಅವರನ್ನು ನಮ್ಮ ಪಾರ್ಟಿಯಲ್ಲಿ ನಿಲ್ಲಿಸಬೇಕು ಅಂತ ಹೇಳಿ ಬಿಜೆಪಿ ಪಕ್ಷ ಕೋರಿತ್ತು. ಇದಕ್ಕೆ ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿದ್ದಾರೆ ಹಾಗೂ ಅದಕ್ಕೆ ಅಗತ್ಯವಾದ ಮಾತುಕತೆಗಳನ್ನು ಅವರೇ ನಡೆಸಿದ್ದಾರೆ. ನಂತರ ಮಂಜುನಾಥ್ ಅವರು ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಅವರು ದೆಹಲಿಗೆ ತೆರಳಿ ಅಮಿಶ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದರು.

ಡಾ.ಮಂಜುನಾಥ್ ನನಗೆ ಗೌರವ, ಹೆಮ್ಮೆ ಇದೆ. ಜಯದೇವ ಆಸ್ಪತ್ರೆಯಲ್ಲಿ ಎರಡು ಸಾವಿರ ಬೆಡ್ ಗಳನ್ನು ಮಾಡಿದ್ದಾರೆ. ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ. ಅದು ದೊಡ್ಡ ಸಾಧನೆ. ಭಾರತದಲ್ಲಿ ಅಂತಹ ಸಾಧನೆ ಮಾಡಿರುವ ವ್ಯಕ್ತಿ ಯಾರಾದರೂ ಇದ್ದರೆ ಅದು ಡಾ. ಮಂಜುನಾಥ್ ಅವರು ಮಾತ್ರ. ಬಡವರಿಗೆ ಪುಕ್ಕಟೆಯಾಗಿ ಚಿಕಿತ್ಸೆ ನೀಡಿದ್ದಾರೆ. ಅಂತಹ ವ್ಯಕ್ತಿಯನ್ನು ಗೆಲ್ಲಿಸಿಕೊಳ್ಳಬೇಕು ಎಂದು  ಹೆಚ್.ಡಿಡಿ ಕರೆ ನೀಡಿದರು.

ಮಂಜುನಾಥ್ ಅವರ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರು ತೆಗೆದುಕೊಂಡಿದ್ದಾರೆ. ಅವರು ಬಿಜೆಪಿ ಜತೆ ಸೇರಿ ಕೆಲಸ ಮಾಡಲಿದ್ದಾರೆ. ಬೆಂಗಳೂರು ನಗರದಲ್ಲಿ ಮೂರು ಕ್ಷೇತ್ರ ಹಾಗೂ ಗ್ರಾಮೀಣದಲ್ಲಿ ಉಳಿದ ಕ್ಷೇತ್ರಗಳಿವೆ. ಇದು ನಿಮ್ಮ ಗಮನದಲ್ಲಿ ಇರಲಿ. ಮಂಡ್ಯ, ಹಾಸನವನ್ನು ಗೆಲ್ಲಬೇಕು ಹಾಗೂ ಮೈಸೂರು ಕ್ಷೇತ್ರದಲ್ಲಿ  ಯದುವೀರ್ ಮಹಾರಾಜರು ಒಳ್ಳೆಯ ವ್ಯಕ್ತಿ. ತುಮಕೂರು ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಬೇಕು ಎಂದು ಮಹಿಳಾ ಕಾರ್ಯಕರ್ತರಿಗೆ ಸೂಚನೆ ನೀಡಿದರು

ಮಹಿಳಾ ಮೀಸಲು ನೆನೆಗುದಿಗೆ ಬಿದ್ದಿತ್ತು:

ಕಳೆದ 25 ವರ್ಷಗಳಿಂದ ಮಹಿಳಾ ಮೀಸಲಾತಿ ವಿಧೇಯಕ ನೆನೆಗುದಿಗೆ ಬಿದ್ದಿತ್ತು. ಆಮೇಲೆ ಬಂದ ಯಾವ ಸರ್ಕಾರವೂ ಅದನ್ನು ಅಂಗೀಕಾರ ಮಾಡಲಿಲ್ಲ. ಮೋದಿ ಅವರ ಸರ್ಕಾರ ಅದನ್ನು ಸಾಕಾರ ಮಾಡಿದೆ. 2028ಕ್ಕೆ ಚುನಾವಣಾ ಮಹಿಳಾ ಮೀಸಲಾತಿ ಕೊಡುತ್ತೇವೆ. 9 ಸ್ಥಾನ ಕರ್ನಾಟಕದಲ್ಲಿ ಮಹಿಳೆಯರಿಗೆ ಎತ್ತಿ ಹಿಡುತ್ತೇವೆ. ಅಸೆಂಬ್ಲಿಯಲ್ಲಿ 80 ಸೀಟು ಮಹಿಳೆಯರಿಗೆ ಬರುತ್ತದೆ. ಮಹಿಳೆಯರಿಗೆ ಭವಿಷ್ಯದಲ್ಲಿ ಒಳ್ಳೆಯ ಕಾಲ ಬರುತ್ತದೆ ಎಂದು ಹೆಚ್.ಡಿ ದೇವೇಗೌಡರು ಹೇಳಿದರು.

Key words: Call – former PM -HD Deve Gowda – win -NDA candidates – state.

website developers in mysore

Font Awesome Icons

Leave a Reply

Your email address will not be published. Required fields are marked *