ರಾಜ್ಯಪಾಲರು ಧ್ವಜಾರೋಹಣದ ವೇಳೆ ಭದ್ರತಾ ಲೋಪ !

ಬೆಂಗಳೂರು: 75ನೇ ಗಣರಾಜೋತ್ಸವ ಸಂಭ್ರಮಾಚರಣೆ ವೇಳೆ ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಮತ್ತು ಸಿಎಂ  ಮುಂದೆ ಕರಪತ್ರ ಹಿಡಿದು ಒಳನುಗ್ಗಿದ ಪ್ರಸಂಗ ನಡೆದಿದೆ.

ವ್ಯಕ್ತಿ ಸ್ಟೇಜ್ ಮುಂದೆಯಿಂದ ಗ್ರೌಂಡ್ ಒಳಗೆ ಓಡಿ ಬಂದಿದ್ದಾನೆ. ಗ್ರೌಂಡ್ ಒಳಗೆ ಓಡಿ ಬಂದ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು ಥಾವರ್​ ಚಂದ್​ ಗೆಹ್ಲೋಟ್​ ಬಳಿ ನಿಂತು ಪೋಸ್ಟರ್ ಪ್ರದರ್ಶನ ಮಾಡಿದ್ದಾನೆ. ಇದನ್ನು ಕಂಡ ಪೊಲೀಸರು ಆತನನ್ನು ಕೂಡಲೆ ಬಂಧಿಸಿದ್ದಾರೆ.

ವ್ಯಕ್ತಿ ಕಣ್ಣೀರಿಡ್ತಾ ಪೋಸ್ಟರ್ ತೋರಿಸಿದ್ದಾನೆ. ಅರೆಸ್ಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಕಬ್ಬನ್ ಪಾರ್ಕ್ ಸ್ಟೇಷನ್ ಗೆ ಕರೆದೊಯ್ದಿದ್ದಾರೆ.

Font Awesome Icons

Leave a Reply

Your email address will not be published. Required fields are marked *