ಜಮ್ಮು-ಕಾಶ್ಮೀರ: ಅಯೋಧ್ಯೆ ರಾಮ ಮಂದಿರವು ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಮಂದಿರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಅಯೋಧ್ಯೆ ಕುರಿತು ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಕಠಿಣ ಪರಿಶ್ರಮದಿಂದ ಇಂದು ರಾಮಮಂದಿರ ಆಗಿದೆ. ಭಗವಾನ್ ರಾಮನು ಹಿಂದೂಗಳಿಗೆ ಮಾತ್ರ ಸೇರಿದವರಲ್ಲ, ಅವರು ಪ್ರಪಂಚದ ಎಲ್ಲರಿಗೂ ಸೇರಿದವರು. ಪುಸ್ತಕಗಳಲ್ಲಿಯೂ ಇದನ್ನೇ ಬರೆಯಲಾಗಿದೆ ಎಂದು ತಿಳಿಸಿದರು.
ಭಗವಾನ್ ರಾಮ ಸಹೋದರತ್ವ, ಪ್ರೀತಿ ಮತ್ತು ಏಕತೆಯ ಬಗ್ಗೆ ತಿಳಿಸಿದ್ದಾರೆ. ಅವರು ಯಾವತ್ತೂ ಭಾಷೆ ಹಾಗೂ ಧರ್ಮದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.