ಉತ್ತರಪ್ರದೇಶ: ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಂದು ಇಡೀ ದೇಶದಾದ್ಯಂತ ರಾಮನ ಜಪ ನಡೆಯಲಿದೆ. ಅದೇ ಕಾರಣಕ್ಕೆ ಇಂದು ದೇಶಾದ್ಯಂತ ಕರಸೇವಕರು ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆಮನೆಗೆ ಹೋಗಿ ನೀಡುತ್ತಿದ್ದಾರೆ. ಏತನ್ಮಧ್ಯೆ, ಮುಸ್ಲಿಂ ಸಮುದಾಯದ ರಾಮ ಭಕ್ತ, ಕರಸೇವಕ, ಭವ್ಯ ರಾಮಮಂದಿರ ಎದ್ದು ನಿಂತಿರುವ ಬಗ್ಗೆ ಸಂತೋಷಪಟ್ಟಿದ್ದಾರೆ.
ಹೌದು. . ಉತ್ತರ ಪ್ರದೇಶದ ಮಿರ್ಜಾಪುರದ ಜಮಾಲ್‌ಪುರ ನಿವಾಸಿ ಮೊಹಮ್ಮದ್ ಹಬೀಬ್ ಎಂಬುವವರು 1992ರಲ್ಲಿ ನಡೆದ ಕರಸೇವೆಯ ಸ್ವಯಂ ಸೇವಕಕರ ಗುಂಪಿನ ಭಾಗವಾಗಿದ್ದರು. ಇಂದು ಕರಸೇವಕರು ಅಯೋಧ್ಯೆಯಿಂದ ತರಲಾಗಿದ್ದ ಮಂತ್ರಾಕ್ಷತೆಯನ್ನು ನಿವಾಸದಲ್ಲಿ ಸ್ವೀಕಾರ ಮಾಡಿದರು. ಈ ವೇಳೆ ತುಂಬಾ ಭಾವುಕರಾದರು ಎಂದು ವರದಿಯಾಗಿದೆ.
ಕರಸೇವಕರು ನೀಡಿದ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಮಾತನಾಡಿದ ಅವರು, “ನಾನು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕನಸು ಕಂಡಿದ್ದೆ. ಡಿಸೆಂಬರ್ 2, 1992ರಲ್ಲಿ ನಾನು ಅಯೋಧ್ಯೆಗೆ ಹೋಗಿದ್ದೆ. ವಾರಣಾಸಿಯ ಕೆಂಟ್ ರೈಲು ನಿಲ್ದಾಣದಿಂದ 50 ಕರಸೇವಕರೊಂದಿಗೆ ಅಯೋಧ್ಯೆಗೆ ತೆರಳಿದ್ದೇವು. ಐದು ದಿನಗಳ ಕಾಲ ಅಲ್ಲಿಯೇ ಇದ್ದೇವು. ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಮತ್ತು ವಿನಯ್ ಕಟಿಯಾರ್ ಅವರ ಭಾಷಣಗಳನ್ನು ಕೇಳಿ ಅಂದು ವಾಪಸ್ ಆಗಿದ್ದೇವು. ಅವರು ಸರಯೂ ನದಿ ತಟಕ್ಕೆ ಹೋಗಿ ಸ್ನಾನ ಮಾಡಿ ಅಲ್ಲಿಂದ ರಾಮಂದಿರ ನಿರ್ಮಾಣ ಮಾಡಲು ಮರಳು ತರೋಣ ಎಂದಿದ್ದರು ಎಂದು ನೆನೆದು ಭಾವುರಾದರು.