ರಾಮಮಂದಿರ ಉದ್ಘಾಟನೆ; ನಾಗರೀಕ ಸಮಿತಿಯಿಂದ 8 ಸಾವಿರ ಜಿಲೇಬಿ ವಿತರಣೆ

ಉಡುಪಿ: ಅಯೋಧ್ಯೆಯ ಭಗವಾನ್ ಶ್ರೀ ರಾಮಲಲ್ಲಾ ದಿವ್ಯಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಸಿಟಿ ಬಸ್ಸು ನಿಲ್ದಾಣದ ಸನಿಹದ ಅಶ್ವತ್ಥಕಟ್ಟೆಯ ಬಳಿ ಜಿಲೇಬಿ ವಿತರಣಾ ಕಾರ್ಯಕ್ರಮವು ವಿಜ್ರಂಭಣೆಯಿಂದ ಜರುಗಿತು. ಜಹಾಗೀರ್ ಭಟ್ ಉಡುಪಿ ಸ್ವೀಟ್ ಹೌಸಿನ ನುರಿತ ಸಿಹಿಖಾದ್ಯ ತಜ್ಞರು 8 ಸಾವಿರ ಜೀಲೆಬಿಗಳನ್ನು ಸ್ಥಳದಲ್ಲಿಯೇ ತಯಾರಿಸಿದ್ದರು. ಮತ್ತು ವೇದಾಂತ ಹೋಟೆಲಿನ ಮಾಲಿಕರು ಬೇಕಾದ ಪರಿಕರಗಳನ್ನು ನೀಡಿ ಸಹಕಾರ ನೀಡಿದ್ದರು. ಸಾರ್ವಜನಿಕರಿಗೆ ಬಿಸಿ ಬಿಸಿಯಾದ ಜಿಲೇಬಿಗಳನ್ನು ನಾಗರಿಕ ಸಮಿತಿಯ ಕಾರ್ಯಕರ್ತರು ಹಾಗೂ ಚಿಟ್ಪಾಡಿ ಚಂಡೆ ಬಳಗದ ಸದಸ್ಯರು ವಿತರಿಸಿದರು.

ಜಿಲೇಬಿ ವಿತರಣೆಗೆ ಉದ್ಯಮಿ ಉದಯ ಕುಮಾರ ಚಾಲನೆ ನೀಡಿದ್ದರು. ನಾಗರಿಕ ಸಮಿತಿಯ ಕಾರ್ಯಕರ್ತರಾದ ಕೆ ಬಾಲಗಂಗಾಧರ ರಾವ್, ತಾರಾನಾಥ ಮೇಸ್ತ ಶಿರೂರು, ಅನುಷಾ ದೇವಾಡಿಗ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *