ರಾಮಲಲ್ಲಾಗೆ 7,000 ಕೆ.ಜಿ ತೂಕದ ‘ರಾಮ ಹಲ್ವಾ’ ನೈವೇದ್ಯ

ಅಯೋಧ್ಯೆ: ರಾಮ ಮಂದಿರದ  ಉದ್ಘಾಟನಾ ಕಾರ್ಯಕ್ರಮಕ್ಕೆ 7,000 ಕೆ.ಜಿ ತೂಕದ ‘ರಾಮ ಹಲ್ವಾ’ ತಯಾರಿಸಲು ನಾಗ್ಪುರದ ಬಾಣಸಿಗ ವಿಷ್ಣು ಮನೋಹರ್ ಅವರು ಮುಂದಾಗಿದ್ದಾರೆ.

ಈ ಬಗ್ಗೆ ಬಾಣಸಿಗ ವಿಷ್ಣು ಮನೋಹರ್ ಮಾತನಾಡಿ, ರಾಮ ಹಲ್ವಾ  ತಯಾರು ಮಾಡಲು 12 ಸಾವಿರ ಲೀಟರ್ ಸಾಮರ್ಥ್ಯದ ವಿಶೇಷ ಕಡಾಯಿ (ಕಡಾಯಿ) ತಯಾರಿಸಿದ್ದು, ಇದರ ತೂಕ 1, 300 ರಿಂದ 1400 ಕೆ.ಜಿ. ಇದ್ದು, ಇದನ್ನು ಉಕ್ಕಿನಿಂದ ತಯಾರಿಸಲಾಗಿದೆ. ಇದರ ಗಾತ್ರ 10 ಅಡಿ. ಇದು 12,000 ಲೀಟರ್ ಸಾಮರ್ಥ್ಯ ಹೊಂದಿದ್ದು. ಅದನ್ನು ಎತ್ತಲು ಕ್ರೇನ್ ಅಗತ್ಯವಿದೆ.

ರಾಮ ಹಲ್ವಾ ತಯಾರು ಮಾಡಲು 900 ಕೆ.ಜಿ ರವೆ, 1000 ಕೆ.ಜಿ ತುಪ್ಪ, 1000 ಕೆ.ಜಿ ಸಕ್ಕರೆ, 2000 ಲೀಟರ್ ಹಾಲು, 2,500 ಲೀಟರ್ ನೀರು, 300 ಕೆ.ಜಿ ಡ್ರೈ ಫ್ರೂಟ್ಸ್ ಮತ್ತು 75 ಕೆ.ಜಿ ಏಲಕ್ಕಿ ಪುಡಿಯನ್ನು ಬಳಸಿ ಹಲ್ವಾವನ್ನು ತಯಾರಿಸಲಾಗುವುದು ಎಂದು‌ ಅವರು ಹೇಳಿದ್ದಾರೆ.

ರಾಮಲಲ್ಲಾಗೆ  ಅರ್ಪಿಸಿದ ನಂತರ ಈ ಪ್ರಸಾದವನ್ನು ಸುಮಾರು ಒಂದೂವರೆ ಲಕ್ಷ ಜನರಿಗೆ ವಿತರಿಸಲಾಗುತ್ತದೆ. ಇದಕ್ಕೆ ನಾವು ʼಕರಸೇವೆಯಿಂದ ಪಾಕಸೇವೆʼ ಎಂದು ಹೆಸರಿಸಿದ್ದೇವೆ ಎಂದು ಅವರು ಹೇಳಿದರು.

Font Awesome Icons

Leave a Reply

Your email address will not be published. Required fields are marked *