ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ನನಗೆ ಗೊತ್ತಲ್ಲದೇ ಕಣ್ಣೀರು ಸುರಿಸಿದ್ದೇನೆ

ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ದೇಶದ ಮೂಲೆ, ಮೂಲೆಯಿಂದ ಆಗಮಿಸಿದ ಚಲನಚಿತ್ರ ನಟರು, ಗಣ್ಯಾತಿಗಣ್ಯರು ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ.

ಇದೆ ಹಿನ್ನೆಲೆಯಲ್ಲಿ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರು ಇಂದು ಅಯೋಧ್ಯೆಗೆ ಭೇಟಿ ನೀಡಿದರು. ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡ ಪವನ್ ಕಲ್ಯಾಣ್ ಭಾವುಕರಾಗಿದ್ದರು.

ಅಯೋಧ್ಯೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್ ಅವರು ನಾನು ಇವತ್ತು ತುಂಬಾ ಎಮೋಷನಲ್ ಆಗಿದ್ದೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ನನಗೆ ಗೊತ್ತಲ್ಲದೇ ಕಣ್ಣೀರು ಸುರಿಸಿದ್ದೇನೆ ಎಂದರು. ಇಡೀ ದೇಶದ ಒಗ್ಗಟ್ಟಿನ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಮಮಂದಿರ ಕಟ್ಟಬೇಕು ಅನ್ನೋದು ಹಲವು ಶತಮಾನಗಳ ಹೋರಾಟದ ಕನಸು. ಆ ಕನಸು, ನೋವಿಗೆ ಸಾರ್ಥಕತೆ ಸಿಕ್ಕಿದ್ದು, ಇಂದು ಭಾರತ ದೇಶದ ಒಗ್ಗಟ್ಟಿನ ಪ್ರದರ್ಶನವಾಗಿದೆ. ದಕ್ಷಿಣ ಭಾರತೀಯರು ತಿರುಮಲಗೆ ಹೋಗುವ ಹಾಗೆ ಇನ್ನುಮುಂದೆ ಅಯೋಧ್ಯೆಗೂ ಭಕ್ತರು ಆಗಮಿಸುತ್ತಾರೆ.

ನಾನು ಅಯೋಧ್ಯೆಗೆ ಮತ್ತೆ ಬರುತ್ತೇನೆ. ಮುಂದಿನ ದಿನಗಳಲ್ಲಿ ನಾನು ಕೂಡ ಅಯೋಧ್ಯೆಗಾಗಿಯೇ ಏನಾದ್ರೂ ಮಾಡುತ್ತೇನೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.

ನಾಳೆಯಿಂದ ಸಾಮಾನ್ಯ ಜನರಿಗೆ ಅಯೋಧ್ಯೆ ರಾಮನ ದರ್ಶನ ಭಾಗ್ಯ ಸಿಗಲಿದೆ.

Font Awesome Icons

Leave a Reply

Your email address will not be published. Required fields are marked *