ನವದೆಹಲಿ: ‘ಸಾರ್ವಜನಿಕರ ಒತ್ತಾಯದ ಮೇರೆಗೆ ಭಾರತದ ಅತ್ಯುತ್ತಮ ಚಾನೆಲ್ ದೂರದರ್ಶನವು ಅದ್ಬುತ ಮಹಾಕಾವ್ಯ ‘ರಾಮಾಯಣ’ ಸೀರಿಯಲ್ ನ ಮರು ಪ್ರಸಾರ ಮಾಡುತ್ತಿದೆ. ಈ ಧಾರಾವಾಹಿ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಫೆಬ್ರವರಿ 5, 2024 ರಿಂದ ಪ್ರತಿದಿನ ಸಂಜೆ 6:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಮಧ್ಯಾಹ್ನ 12:00 ಗಂಟೆಗೆ ಮರು ಪ್ರಸಾರವಾಗಲಿದೆ.
‘ರಾಮಾಯಣ’ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಳವಾಗಿ ಸ್ಪರ್ಶಿಸುವ ಐತಿಹಾಸಿಕ ಮಹಾಕಾವ್ಯವಾಗಿದೆ.
80-90 ರ ದಶಕದಲ್ಲಿ ಮೂಡಿಬಂದ ಧಾರಾವಾಹಿ ಅತ್ಯಧಿಕ ವೀಕ್ಷಣೆಗೊಳಪಟ್ಟು ವಿಶ್ವದಾಖಲೆ ನಿರ್ಮಿಸಿತ್ತು.ದೂರದರ್ಶನದ ಮಹಾನಿರ್ದೇಶಕ ಕಾಂಚನ್ ಪ್ರಸಾದ್, “ಈ ಮಹಾಕಾವ್ಯದ ಪ್ರಯಾಣದ ಮರು ಪ್ರಸಾರಕ್ಕೆ ಸೇರಲು ಮತ್ತು ಈ ಅಸಾಧಾರಣ ಕಥೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ನಾವು ಎಲ್ಲಾ ವೀಕ್ಷಕರನ್ನು ಆಹ್ವಾನಿಸುತ್ತೇವೆ” ಎಂದು ಹೇಳಿದರು.
मंगल भवन अमंगल हारी।
द्रवहु सुदसरथ अजिर बिहारी॥धर्म, प्रेम और समर्पण की अद्वितीय गाथा…एक बार फिर आ रहा है पूरे भारत का सबसे लोकप्रिय शो 'रामायण', देखिए #DDNational पर 5 फरवरी से प्रतिदिन शाम 6 बजे और पुनः प्रसारण दोपहर 12 बजे। #Ramayan | @arungovil12 | @ChikhliaDipika |… pic.twitter.com/s6wpBr2aHn
— Doordarshan National दूरदर्शन नेशनल (@DDNational) February 4, 2024