ದೆಹಲಿ: ದೆಹಲಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣ ಗಣನೆ ಆರಂಭವಾಗಿದೆ. ಈ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿಗೆ ವಿಶ್ವಾದ್ಯಂತ ಭಕ್ತರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ.
ಅವರಲ್ಲಿ ಕಾಶಿ ಮತ್ತು ಪ್ರಯಾಗ್‌ರಾಜ್‌ನ ಭಿಕ್ಷುಕರು ದೇವಾಲಯದ ನಿರ್ಮಾಣಕ್ಕೆ 4 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್‌ಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ನಿಧಿ ಅಭಿಯಾನದಲ್ಲಿ ಪ್ರಯಾಗ್‌ರಾಜ್ ಮತ್ತು ಕಾಶಿಯಿಂದ 300ಕ್ಕೂ ಹೆಚ್ಚು ಭಿಕ್ಷುಕರು ಭಾಗವಹಿಸಿದ್ದರು. ಶ್ಲಾಘನೆಯ ಸಂಕೇತವಾಗಿ, ಮುಂಬರುವ ರಾಮಲಲ್ಲಾ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರನ್ನು ಆಹ್ವಾನಿಸಲಾಗುತ್ತದೆ.
ಕೆಲ ಸಮಯದ ಹಿಂದೆ ಟ್ರಸ್ಟ್‌ಗೆ ಮಾಸಿಕ 1 ಕೋಟಿ ರೂ.ಗಿಂತ ಹೆಚ್ಚು ದೇಣಿಗೆ ಬಂದಿದೆ. ರಾಮಮಂದಿರ ಟ್ರಸ್ಟ್ ತನ್ನ ನವದೆಹಲಿಯ ಬ್ಯಾಂಕ್ ಖಾತೆಯಲ್ಲಿ ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ದೇಣಿಗೆಯನ್ನು ಸ್ವೀಕರಿಸಿದೆ. ಯುಎಇಯ ಭಕ್ತರೊಬ್ಬರು 11,000 ರೂ., ಆಸ್ಟ್ರೇಲಿಯಾದ ಇನ್ನೊಬ್ಬರು 21,000 ರೂ. ನೀಡಿದ್ದಾರೆ.