ರಾಮ ಮಂದಿರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಬೇಡಿ

ದೆಹಲಿ: ಭಗವಾನ್ ರಾಮ ಲಲ್ಲಾನ ಪ್ರಾಣ-ಪ್ರತಿಷ್ಠೆಯೊಂದಿಗೆ ರಾಮ ಮಂದಿರವನ್ನು ಜ.22 ರಂದು ಉದ್ಘಾಟಿಸಲಾಗಿದ್ದು ಈಗಾಗಲೇ ವಿಧಿವಿಧಾನಗಳು ನಡೆಯುತ್ತಿದೆ. ಈ ಸಮಾರಂಭ ನಡೆಯುವ ಮೊದಲೇ, ವಿಐಪಿ ಟಿಕೆಟ್‌ಗಳು, ರಾಮಮಂದಿರ ಪ್ರಸಾದವನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಹಲವಾರು ವಂಚನೆಯ ಲಿಂಕ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೆಲವು ಪರಿಶೀಲಿಸದ, ಪ್ರಚೋದನಕಾರಿ ಮತ್ತು ನಕಲಿ ಸಂದೇಶಗಳನ್ನು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ, ಇದು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತದೆ” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ .

ಅಮೆಜಾನ್ ನಲ್ಲಿ’ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ್’ ಎಂದು ಸಿಹಿತಿಂಡಿ ಮಾರಾಟ ಮಾಡುತ್ತಿರುವ ಬಗ್ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದಿಂದ ನೋಟಿಸ್ ಅನ್ನು ಸ್ವೀಕರಿಸಿದೆ. ಅಮೆಜಾನ್ ತನ್ನ ನೀತಿಗಳಿಗೆ ಅನುಗುಣವಾಗಿ ಅಂತಹ ಮಾರಾಟ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ. ಕೆಲವು ದಿನಗಳ ಹಿಂದೆ, ಪ್ರಾಣ-ಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ತ್ವರಿತ ವಿಐಪಿ ಟಿಕೆಟ್‌ಗಳ ಭರವಸೆಯೊಂದಿಗೆ ನಕಲಿ ಕ್ಯೂ ಆರ್ ಕೋಡ್‌ ವಾಟ್ಸ್ಆಪ್ ನಲ್ಲಿ  ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಾಣ-ಪ್ರತಿಷ್ಠಾ ಕಾರ್ಯಕ್ರಮಕ್ಕಿರುವ ಆಹ್ವಾನವನ್ನು ಆಯ್ದ ಅತಿಥಿಗಳಿಗೆ ದೇವಾಲಯದ ಟ್ರಸ್ಟ್ ಮಾತ್ರ ಕಳುಹಿಸುತ್ತಿದೆ. ಹಾಗಾಗಿ ಈ ತರಹದ ವಂಚನೆಯಿಂದ ಜಾಗೃತರಾಗಿರಿ.

Font Awesome Icons

Leave a Reply

Your email address will not be published. Required fields are marked *