ರಾಮ ಮಂದಿರದ ಮೆರವಣಿಗೆಯ ವೇಳೆ ವಿದ್ಯುತ್ ಅವಘಡ : 9 ಮಕ್ಕಳ ಸ್ಥಿತಿ ಗಂಭೀರ

ಅಮೇಥಿ : ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸುವ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ ಒಂಬತ್ತು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಸೋಮವಾರ (ಜ.22) ನಡೆದಿದೆ.

ಮೆರವಣಿಗೆಯ ಸಮಯದಲ್ಲಿ ಡಿಜೆಯನ್ನು ಹೊತ್ತ ಟ್ರಕ್ ಮೇಲೆ ಮಕ್ಕಳು ಸವಾರಿ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅದರ ಮೇಲಿದ್ದ ಕೆಲವು ಧ್ವಜಗಳು ಹೈಟೆನ್ಷನ್ ತಂತಿಗೆ ಸಿಲುಕಿ ವಿದ್ಯುತ್ ಶಾಕ್ ಹೊಡೆದಿದೆ. ಸದ್ಯ 9 ಮಕ್ಕಳ ಸ್ಥಿತಿ ಕೂಡ ಗಂಭೀರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *