ರಾಮ ಮಂದಿರ ಉದ್ಘಾಟನೆ: ಅಯೋಧ್ಯೆಗೆ ಬಂದಿಳಿದ ಸೂಪರ್ ಸ್ಟಾರ್ ರಜನಿಕಾಂತ್

ಅಯೋಧ್ಯೆ: ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದ್ದು, ರಾಮ ಮಂದಿರಕ್ಕೆ ಅನೇಕ ಸ್ಟಾರ್​ ನಟ ನಟಿಯರು ಆಗಮಿಸುತ್ತಿದ್ದಾರೆ. ಈಗ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ತೆರಳಿದ್ದಾರೆ.

ಸೂಪರ್​ ಸ್ಟಾರ್​​ ರಜನಿಕಾಂತ್​ ಅವರಿಗೂ ಕೂಡ ವಿಶೇಷ ಆಹ್ವಾನ ನೀಡಲಾಗಿತ್ತು. ಈಗ ನಟ ರಜನಿಕಾಂತ್​ ಹಾಗೂ ನಟ ಧನುಷ್ ಕೂಡ ಚೆನ್ನೈನಿಂದ ಅಯೋಧ್ಯೆಗೆ ಬಂದಿಳಿದಿದ್ದಾರೆ.

ಸದ್ಯ ನಾಳೆ ಬೆಳಗ್ಗೆ 10.55ಕ್ಕೆ ಶ್ರೀರಾಮ ಜನ್ಮಭೂಮಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬಳಿಕ ಮಧ್ಯಾಹ್ನ 12.05ರಿಂದ 12.55ಕ್ಕೆ ಪ್ರಾಣ ಪ್ರತಿಷ್ಠಾನ ಕಾರ್ಯದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.

Font Awesome Icons

Leave a Reply

Your email address will not be published. Required fields are marked *