ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಬಿಜೆಪಿಗೆ ಹೆಚ್ಚಿನ ಸೀಟು- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಹುಬ್ಬಳ್ಳಿ, ಏಪ್ರಿಲ್ ,12,2024 (www.justkannada.in): ರಾಹುಲ್ ಗಾಂಧಿ ಹೋದ ಕಡೆಯೆಲ್ಲಾ ಬಿಜೆಪಿಗೆ ಹೆಚ್ಚಿನ ಸೀಟು ಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್‌  ಸ್ಪರ್ಧೆ ಮಾಡಿರುವುದು ಕೇವಲ 230 ಸೀಟ್ ಗಳಲ್ಲಿ ಮಾತ್ರ. ಎಲ್ಲೆಲ್ಲಿ ರಾಹುಲ್ ಗಾಂಧಿ ಅವರಿಂದ ಪ್ರಚಾರ ಮಾಡಿಸುತ್ತೀರೋ ಅಲ್ಲೆಲ್ಲಾ ಬಿಜೆಪಿ ಹೆಚ್ಚಿನ ಸೀಟುಗಳು ಬಂದಿವೆ ಎಂದರು.

2019ರ ಇದೇ ಲೋಕಸಭಾ ಚುನಾವಣೆಯಲ್ಲಿ 303 ಸೀಟುಗಳು ಬಂದಿವೆ. ಈ ಬಾರಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ 375 ಸೀಟ್ ಗಳು ಬುರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಪ್ರಧಾನಮಂತ್ರಿ ಅಲ್ಲ ಪ್ರಚಾರ ಮಂತ್ರಿ ಎಂದು ಟೀಕಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ,  ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ರಾಜಕೀಯ ತೆವಲಿಗೆ ಮಾತನಾಡುತ್ತಾರೆ. ನಿಮ್ಮ ತಂದೆಯವರ ಕಾಲದಲ್ಲಿ ಕಾಂಗ್ರೆಸ್ ಏನಾಗಿದೆ ನೋಡಿ. ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗೋಕೆ ಏನೆಲ್ಲ ಮಾಡಿದ್ದಾರೆ ಎಂದು ನೋಡಿ ಎಂದು ಟಾಂಗ್ ಕೊಟ್ಟರು.

Key words: Rahul Gandhi, BJP,  more seats, PrahladJoshi

Font Awesome Icons

Leave a Reply

Your email address will not be published. Required fields are marked *