ಕಾಸರಗೋಡು: ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯಲ್ಲಿ 70 ಲಕ್ಷ ರೂ. ಗೆದ್ದಿದ್ದ ಯುವಕನೋರ್ವ ಬೇಕರಿ ಅಂಗಡಿಯೊಳಗಡೆ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ನೆಲ್ಲಿಕುಂಜೆಯಲ್ಲಿ ನಡೆದಿದೆ.
ಬಂಗ್ರಗುಡ್ಡೆಯ ವಿವೇಕ್ ಶೆಟ್ಟಿ (38) ಮೃತ ಪಟ್ಟವರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ನೆಲ್ಲಿಕುಂಜೆ ರಸ್ತೆಯ ಬೇಕರಿ ಅಂಗಡಿಯೊಳಗಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಟರ್ ಮುಚ್ಚಿರುವುದರಿಂದ ಸಂಶಯಗೊಂಡು ಸಹೋದರ ತೊರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ವಿವೇಕ್ ಗೆ ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ 70 ಲಕ್ಷ ರೂ. ಲಭಿಸಿತ್ತು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.