ಲೆನ್ಸ್‌ಕಾರ್ಟ್‌ ಮನವಿಗೆ ʼಎಕ್ಸ್‌ʼನಲ್ಲೇ ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್‌

ಬೆಂಗಳೂರು: ಲೆನ್ಸ್‌ಕಾರ್ಟ್‌ ಘಟಕ ಸ್ಥಾಪನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 60 ಕಿ.ಮೀ. ಆಸುಪಾಸಿನಲ್ಲಿ 25 ಎಕರೆ ಭೂಮಿ ಅಗತ್ಯವಿರುವ ಬಗ್ಗೆ ಪೀಯುಷ್‌ ಬನ್ಸಲ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು, ಅದಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಕೇವಲ ಐದು ನಿಮಿಷಗಳಲ್ಲಿ ಸ್ಪಂದಿಸಿದ್ದಾರೆ.

ರಾಜಧಾನಿಯ ವಿಮಾನ ನಿಲ್ದಾಣದ ಸಮೀಪದಲ್ಲಿ ಯಾವುದಾದರೂ ಕಂಪೆನಿ ಭೂಮಿಯನ್ನು ಮಾರುವ ಯೋಚನೆಯಲ್ಲಿದ್ದರೆ ಇಮೇಲ್‌ ಮೂಲಕ ಮಾಹಿತಿ ಕೊಡಬೇಕೆಂದು ಮನವಿ ಮಾಡಲಾಗಿತ್ತು.

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಪಾಟೀಲ್‌, ಕರ್ನಾಟಕವೇ ಇದಕ್ಕೆ ಸೂಕ್ತ ಸ್ಥಳ. ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಿ, ಅಗತ್ಯತೆಗಳನ್ನೆಲ್ಲ ಪೂರೈಸುವ ಮೂಲಕ ಸಹಕರಿಸುತ್ತಾರೆ ಎಂದು ಬರೆದಿದ್ದಾರೆ.

ಸಚಿವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ಲಭಿಸುತ್ತಿದೆ. ಜೊತೆಗೆ ಲೆನ್ಸ್‌ಕಾರ್ಟ್‌ ಘಟಕದ ಸ್ಥಾಪನೆಗೆ ಜನ ಮೈಸೂರು, ವಿಜಯಪುರ, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಹಲವು ಊರುಗಳನ್ನು ಸೂಚಿಸುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *