ಲೇಡಿ ಕಂಡಕ್ಟರ್ ‘ದಾದಾಗಿರಿ’ಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ತಬ್ಬಿಬ್ಬು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಉಡುಪಿ: ಲೇಡಿ ಕಂಡಕ್ಟರ್ ಓರ್ವರು ಇನ್ನೊಂದು ಬಸ್ ನ ಕಂಡಕ್ಟರ್ ಮೇಲೆ ತೋರಿದ ದಾದಾಗಿರಿಯ ವಿಡಿಯೋ ವೈರಲ್ ಆಗುತ್ತಿದೆ.

ಉಡುಪಿಯ ಸಂತೆಕಟ್ಟೆ ಬಳಿ ಈ ಘಟನೆ ಸಂಭವಿಸಿದೆ. ಎಂದಿನಂತೆ ಖಾಸಗಿ ಬಸ್ ಗಳ ಟೈಮಿಂಗ್ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ತನಗಿಂತ ಮೊದಲೇ ಬಂದು ಬಸ್ ನಿಲ್ಲಿಸಿದ್ದಕ್ಕಾಗಿ ಲೇಡಿ ಕಂಡಕ್ಟರ್ ರೇಖಾ ಎಂಬವರು ಬಸ್ ಗೆ ಹತ್ತಿ ಕಂಡಕ್ಟರ್ ನನ್ನು ತರಾಟೆಗೆ ತೆಗೆದುಕೊಂಡು ಜಾಡಿಸಿದ್ದಾರೆ.

ಒಂದು ಹಂತದಲ್ಲಿ ಚಪ್ಪಲಿಯನ್ನೂ ಕೈಗೆತ್ತಿಕೊಂಡಿದ್ದಾಳೆ. ಕೆಲ ಹೊತ್ತು ಈ ಲೇಡಿಯ ರೌದ್ರಾವತಾರ ಕಂಡು ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ. ಕೊನೆಗೆ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡ ಬಳಿಕ , ಆಕೆ ಬಸ್ ನಿಂದ ಇಳಿದು ಹೋಗಿದ್ದಾಳೆ. ಸದ್ಯ ಈ ಘಟನೆಯ ಸಿಸಿಟಿವಿ ಫೂಟೇಜ್ ವೈರಲ್ ಆಗುತ್ತಿದೆ.

Font Awesome Icons

Leave a Reply

Your email address will not be published. Required fields are marked *