ಲೋಕಸಭೆಯಲ್ಲಿ ‘ಕೇಂದ್ರ ಹಣಕಾಸು ಮಸೂದೆ’ ಅಂಗೀಕಾರ: ‘ಕಲಾಪ’ ನಾಳೆಗೆ

ನವದೆಹಲಿ: ಇಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದಂತ ಕೇಂದ್ರ ಹಣಕಾಸೂ ಮಸೂದೆ ಅಂಗೀಕಾರಗೊಂಡಿದೆ. ಈ ಬಳಿಕ ಕಲಾಪ ನಾಳೆಗೆ ಮುಂದೂಡಿಕೆಯಾಗಿದೆ.

ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಕೇಂದ್ರ ಮಧ್ಯಂತರ ಬಜೆಟ್ 2024-25 ಅನ್ನು ಮಂಡಿಸಿದರು. ತಮ್ಮ ಭಾಷಣದ ಬಳಿಕ ಲೋಕಸಭೆಯನ್ನು ಕೇಂದ್ರ ಹಣಕಾಸು ಮಸೂದೆ ಅಂಗೀಕಾರಕ್ಕೆ ಕೋರಿದರು.

ಸ್ಪೀಕರ್ ಅವರು ನಿರ್ಮಲಾ ಸೀತಾರಾಮ್ ಅವರು ಮಂಡಿಸಿದಂತ ಕೇಂದ್ರ ಹಣಕಾಸು ಮಸೂದೆಯನ್ನು ಮತಕ್ಕೆ ಹಾಕಿದರು. ಆಗ ಸರ್ವಾನುಮತದಿಂದ ಮಸೂದೆ ಅಂಗೀಕಾರವನ್ನು ಪಡೆದಿದೆ. ಈ ಬಳಿಕ ಲೋಕಸಭೆಯ ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *