ಮುಂಬೈ: ಹಿರಿಯ ನಟಿ ಸೀಮಾ ದೇವ್ (81) ವಯೋಸಹಜ ಕಾಯಿಲೆಗಳಿಂದ ಗುರುವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು. ಈ ಬಗ್ಗೆ ಮಾಹಿತಿ ನೀಡಿರುವ ಅವರ ಪುತ್ರ, ನಿರ್ಮಾಪಕ ಅಭಿನಯ್ ದೇವ್, ಇಂದು ಬೆಳಿಗ್ಗೆ 8.30-9 ಕ್ಕೆ ನನ್ನ ತಾಯಿ ನಿಧನರಾದರು. ಅವರು ಅಲ್ಜಿಮರ್ ಕಾಯಿಲೆಯಿಂದ (ನೆನಪಿನ ಶಕ್ತಿ ಕುಂದುವ) ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.
ಸುಮಾರು 80ಕ್ಕೂ ಹೆಚ್ಚು ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದ ನಟಿ ಸೀಮಾ ದೇವ್ ಮರಾಠಿ ಚಿತ್ರರಂಗದಲ್ಲಿ ತಮ್ಮ ನಟನಾ ಚತುರತೆಯಿಂದ ಅಚ್ಚೊತ್ತಿದ್ದರು.
1957ರಲ್ಲಿ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಮೊದಲು ಆಲಿಯಾ ಭೊಗಾಸಿ ಚಿತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಅವರ ಸಿನಿ ಪ್ರಯಾಣ ಆರಂಭವಾಗಿ ಆನಂದ, ಗುರುದೇವ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದರು. 2021ರಲ್ಲಿ ಬಿಡುಗಡೆಯಾದ ಜೀವನ್ ಸಂಧ್ಯಾ ಮರಾಠಿ ಚಿತ್ರ ಅವರ ಕೊನೆಯ ಚಿತ್ರವಾಗಿತ್ತು.