ವಾಮಮಾರ್ಗದಲ್ಲಿ ಉದ್ಯೋಗಿಗಳ ಸೆಳೆದ ಕಾಗ್ನಿಜೆಂಟ್‌: ಇನ್ಫೋಸಿಸ್ ಪತ್ರ

ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ ಅನೈತಿಕ ರೀತಿಯಲ್ಲಿ ಉದ್ಯೋಗಿಗಳನ್ನು ಸೆಳೆಯಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಗ್ನೈಜೆಂಟ್ ಟೆಕ್ನಾಲಜೀಸ್ ಸಂಸ್ಥೆಗೆ ಇನ್ಫೋಸಿಸ್ ಪತ್ರ ಬರೆದಿದೆ ಎಂದು ಮನಿ ಕಂಟ್ರೋಲ್​ನಲ್ಲಿ ವರದಿಯಾಗಿದೆ.

ಇತ್ತೀಚೆಗೆ ಭಾರತದ ಐಟಿ ವಲಯದಲ್ಲಿ ಸೀನಿಯರ್ ಹುದ್ದೆಗಳ ಮಟ್ಟದಲ್ಲಿ ಸಾಕಷ್ಟು ವಲಸೆಗಳಾಗಿದ್ದು ಹೆಚ್ಚಿನ ಬಾರಿ ಕೇಳಿಬಂದಿರುವ ಹೆಸರು ಕಾಗ್ನೈಜೆಂಟ್​ನದ್ದೇ. ಅದರಲ್ಲೂ ಇನ್ಫೋಸಿಸ್ ಮತ್ತು ವಿಪ್ರೋದಿಂದ ಹಲವು ಹಿರಿಯ ಅಧಿಕಾರಿಗಳು ಕಾಗ್ನೈಜೆಂಟ್ ಟೆಕ್ನಾಲಜೀಸ್ ಅನ್ನು ಸೇರಿಕೊಂಡಿದ್ದಾರೆ.

ವಿಪ್ರೋ ಸಂಸ್ಥೆ ಕಾಗ್ನೈಜೆಂಟ್ ಸೇರಿದ ತನ್ನ ಇಬ್ಬರು ಮಾಜಿ ಉದ್ಯೋಗಿಗಳ ಮೇಲೆ ಕಾನೂನು ಮೊಕದ್ದಮೆ ಹೂಡಿದೆ. ಇದರ ಬೆನ್ನಲ್ಲೇ ಇನ್ಫೋಸಿಸ್ ತನ್ನ ಪ್ರತಿಸ್ಪರ್ಧಿ ಸಂಸ್ಥೆ ವಿರುದ್ಧ ತಗಾದೆ ವ್ಯಕ್ತಪಡಿಸಿರುವ ಬೆಳವಣಿಗೆ ಆಗಿರುವುದು ಕುತೂಹಲ ಮೂಡಿಸಿದೆ. ಉನ್ನತ ಸ್ತರದ ಉದ್ಯೋಗಿಗಳ ನೇಮಕಾತಿ ಗುತ್ತಿಗೆಯಲ್ಲಿ, ನಾನ್ ಕಾಂಪೀಟ್ ನಿಯಮ ಅಡಕ ಮಾಡಲಾಗಿರುತ್ತದೆ.

ಕೆಲಸ ಬಿಡುವ ಉದ್ಯೋಗಿಯು ಸಂಸ್ಥೆಗೆ ಪ್ರತಿಸ್ಪರ್ಧಿಯಾಗಬಾರದು ಎನ್ನುತ್ತದೆ ಈ ನಿಯಮ. ಆದರೆ, ಈ ಕಾನೂನನ್ನು ಅನ್ವಯ ಮಾಡುವುದು ಅಸಾಧ್ಯ ಎನ್ನಲಾಗಿದೆ. ಆದರೆ, ಮುಂದೆ ಇಂಥ ಅಕ್ರಮ ನೇಮಕಾತಿ ಪ್ರಯತ್ನ ಆಗಬಾರದು ಎಂದು ಕಾಗ್ನೈಜೆಂಟ್ ಸಂಸ್ಥೆಗೆ ಎಚ್ಚರಿಕೆ ಕೊಡುವ ಉದ್ದೇಶದಿಂದ ಇನ್ಪೋಸಿಸ್ ಪತ್ರ ಬರೆದಿರಬಹುದು ಎಂದು ಅಂದಾಜಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *