ಅಮೆರಿಕಾ: ನ್ಯೂಯಾರ್ಕ್ ನಗರದಲ್ಲಿ 4.8 ತೀವ್ರತೆಯ ಭೂಕಂಪನದ ಅನುಭವವಾಗಿದ್ದು, ಭೂಮಿಯ ಕಂಪನಕ್ಕೆ ಅಮೆರಿಕಾದ ಸ್ವಾತಂತ್ರದ ಪ್ರತಿಮೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಅಲುಗಾಡಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಿನದ ಹಿಂದಷ್ಟೇ ಸ್ಟ್ಯಾಚ್ಯೂ ಆಫ್ ಲಿಬರ್ಟಿಗೆ ಸಿಡಿಲು ಬಡಿದಿತ್ತು. ನ್ಯೂಯಾರ್ಕ್ ನಗರದಲ್ಲಿ 4.8 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಯಾವುದೇ ಹಾನಿಯಾಗಿಲ್ಲ.
ಅರ್ತ್ ಕ್ಯಾಮ್‌ನಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಅಮೆರಿಕಾದ ಸ್ವಾತಂತ್ರ್ಯದ ಪ್ರತಿಮೆ ಅಲುಗುತ್ತಿರುವ ದೃಶ್ಯ ವೈರಲ್ ಆಗಿದೆ. ನ್ಯೂಜೆರ್ಸಿಯ ಕ್ಯಾಲಿಫೋನ್ ಬಳಿ ಭೂಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಘಟನೆಯ ಸಮಯದಲ್ಲಿ ಎಲ್ಲಿಸ್ ದ್ವೀಪವು ಅಲುಗಾತ್ತಿರುವುದು ಕಾಣಿಸುತ್ತಿದೆ ಲೇಡಿ ಲಿಬರ್ಟಿಯ ಪ್ರತಿಮೆಯೂ ಭೂಕಂಪನದ ಸಮಯದಲ್ಲಿ ಕೆಲ ಸೆಕೆಂಡ್ ಅಲುಗುವುದನ್ನು ಕೂಡ ನೋಡಬಹುದು.
ನ್ಯೂಯಾರ್ಕ್‌ನಲ್ಲಿ ಭೂಮಿ ಕಂಪಿಸಿ ಗಂಟೆಗಳ ನಂತರ ನ್ಯೂಜೆರ್ಸಿಯಲ್ಲಿಯೂ 4.0 ತೀವ್ರತೆಯ ಭೂ ಕಂಪನವಾಗಿದೆ. ಈ ವೇಳೆ ಗವರ್ನರ್ ಫಿಲ್ ಮರ್ಫಿ ಅವರು ತುರ್ತು ಮಾರ್ಗಸೂಚಿಗಳನ್ನು ಅನುಸರಿಸಲು ಸ್ಥಳೀಯ ನಿವಾಸಿಗಳಿಗೆ ಕರೆ ನೀಡಿದರು. ನ್ಯೂಜೆರ್ಸಿ ಈಗಷ್ಟೇ ಆಘಾತವನ್ನು ಅನುಭವಿಸಿದೆ. ದಯವಿಟ್ಟು ಕೆಳಗಿನ ತುರ್ತು ಮಾರ್ಗದರ್ಶನವನ್ನು ಅನುಸರಿಸಿ ಮತ್ತು ನಿಮಗೆ ನಿಜವಾದ ತುರ್ತು ಪರಿಸ್ಥಿತಿ ಇಲ್ಲದಿದ್ದರೆ 911 ಗೆ ಕರೆ ಮಾಡುವುದನ್ನು ತಪ್ಪಿಸಿ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
EarthCam captured the moment a 4.8-magnitude earthquake recorded in New Jersey shook residents in surrounding states and New York City on Friday morning. The earthquake was the strongest in NJ since 1884. pic.twitter.com/cKXmXqmxtW
— EarthCam (@EarthCam) April 5, 2024