ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ತೀರ್ಮಾನ-ಸಚಿವ ಕೃಷ್ಣಭೈರೇಗೌಡ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ಬೆಂಗಳೂರು, ಮಾರ್ಚ್​​​,14,2024(www.justkannada.in):  ವಿಧಾನಸೌಧದ ಆವರಣದಲ್ಲಿ 23 ಕೋಟಿ‌ ರೂ. ವೆಚ್ಚದಲ್ಲಿ‌ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಕಂದಾಯ‌ ಸಚಿವ ಕೃಷ್ಣಬೈರೇಗೌಡ,  ಕೆಂಗಲ್ ಹನುಮಂತಯ್ಯ ಪ್ರತಿಯ ರಸ್ತೆಯ ಪಕ್ಕದಲ್ಲಿ ಭುವನೇಶ್ವರಿ‌ ಪ್ರತಿಮೆ ಸ್ಥಾಪನೆ ಆಗಲಿದೆ. ಇದಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಕಲ್ಲು, ಲೋಹದ ಪ್ರತಿಮೆಗೆ ಎಲ್ಲದಕ್ಕೂ ಹಣ ಬೇಕಾಗುತ್ತದೆ. ಏರ್ಪೋಟ್​​ನಲ್ಲಿ ಕೆಂಪೇಗೌಡ ಪ್ರತಿಮೆಗೆ 40-60 ಕೋಟಿ ರೂ. ಆಗಿತ್ತು. ಬೆಂಗಳೂರಿನಲ್ಲಿ ಅವಶ್ಯಕತೆಗಳು ಬೆಳೆಯುತ್ತಿದೆ. ಸಂಚಾರದ್ದೇ ದೊಡ್ಡ ಸಮಸ್ಯೆ ಆಗಿದೆ. ಟ್ರಾಫಿಕ್‌ ಸಮಸ್ಯೆ ಬಗೆಹರಿಸುವುದಕ್ಕೆ ಮೆಟ್ರೋ ಒಂದೇ ಪರ್ಯಾಯ ಮಾರ್ಗ. ಭವಿಷ್ಯದ ಅವಶ್ಯಕತೆ ಗಮನದಲ್ಲಿ ಇಟ್ಟುಕೊಂಡು‌ ಫೇಸ್ 3 ಒಪ್ಪಿಗೆ ನೀಡಿದೆ. ಎರಡು ಮಾರ್ಗಗಳನ್ನ‌ ಕೈಗೆ ಎತ್ತಿಕೊಳ್ಳಲು ಒಪ್ಪಿಗೆ ನೀಡಿದೆ ಎಂದರು.

PSI ನೇಮಕಾತಿ ಹಗರಣ ಸಂಬಂಧ ಬಿ.ವೀರಪ್ಪ ಸಮಿತಿ ರಚಿಸಿದ್ದವು. ಈ ಸಂಬಂಧ ಬಿ.ವೀರಪ್ಪ ನೇತೃತ್ವದ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಸರ್ಕಾರಿ, ಖಾಸಗಿ ವ್ಯಕ್ತಿಗಳು ಸೇರಿ 113 ಜನರು ಭಾಗಿ ಎಂದು ವರದಿ ನೀಡಲಾಗಿದೆ. ಪ್ರಕರಣ ಸಂಬಂಧ ಎಸ್​ಟಿಐ ರಚಿಸಬೇಕೆಂದು ವೀರಪ್ಪ ಹೇಳಿದ್ದಾರೆ. ಹೆಚ್ಚುವರಿ ತನಿಖೆಗಾಗಿ ಎಸ್​ಐಟಿ‌ ರಚಿಸಲು ತೀರ್ಮಾನ ಮಾಡಿದ್ದೇವೆ ಎಂದು  ಕೃಷ್ಣಭೈರೇಗೌಡ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಓಪನ್​​ಗೆ ಒಪ್ಪಿಗೆ. ಕಡಬ ವೆಟರ್ನರಿ‌ ಕಾಲೇಜಿನ ಅಭಿವೃದ್ದಿಗೆ 163 ಕೋಟಿ ರೂ. ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಹೊಸ ಹಾಸ್ಟೆಲ್​ ಸ್ಥಾಪನೆಗೆ 170 ಕೋಟಿ ರೂ. ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ರೈತರ ಉತ್ಪಾದನೆ, ಲಾಭಾಂಶ ಜಾಸ್ತಿ ಆಗಬೇಕು. ಬೆಳೆ ಸಂರಕ್ಷಣೆ, 67 ಕೋಟಿ‌ ವೆಚ್ಚದಲ್ಲಿ ಬಯೋಟೆಕ್ ಅಭಿವೃದ್ಧಿಗೆ ಅಗ್ರಿ‌ ಇನ್ನೊವೇಷನ್ ಸೆಂಟರ್ ಮಾಡಲು‌ ತೀರ್ಮಾನ ಆಗಲಿದೆ. ಬೆಂಗಳೂರಿನಲ್ಲೇ ಎಲೆಕ್ಟ್ರಾನಿಕ್‌ ಸಿಟಿ ಬಳಿ ಕೊಡುತ್ತೇವೆ ಎಂದಿದ್ದಾರೆ.

Key words: Decision – Bhubaneswari statue – Vidhana Soudha -Minister -Krishnabhairegowda

website developers in mysore

Font Awesome Icons

Leave a Reply

Your email address will not be published. Required fields are marked *