ವಿಮಾನ ನಿಲ್ದಾಣದಲ್ಲಿ ಶಾರುಖ್​ನ ತಡೆದು ದಾಖಲೆ ಪರಿಶೀಲನೆ !

ಮುಂಬೈ: ಶಾರುಖ್ ಖಾನ್ ಅವರು ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಮ್ಯಾನೇಜರ್ ಅವರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದಾಖಲೆಗಳನ್ನು ನೀಡಿ ಮಾತುಕತೆ ಆಡುತ್ತಿರುವುದು ವಿಡಿಯೋದಲ್ಲಿ ಇದೆ.

ಶಾರುಖ್ ಖಾನ್ ಅವರು ಬೇರೆ ಬೇರೆ ಕೆಲಸಕ್ಕಾಗಿ ಹಲವು ಕಡೆಗಳಲ್ಲಿ ಸುತ್ತಾಟ ನಡೆಸುತ್ತಾ ಇರುತ್ತಾರೆ. ಹೀಗಾಗಿ ಅವರು ಮುಂಬೈ ವಿಮಾನ ನಿಲ್ದಾಣ ಬಳಸಲೇಬೇಕು. ಆದರೆ, ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಕುರಿತ ಯಾವುದೇ ಮಾಹಿತಿಯನ್ನು ಅವರು ಲೀಕ್ ಆಗಲು ಬಿಡುವುದಿಲ್ಲ. ಆದರೆ ಈ ಬಾರಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.

ಶಾರುಖ್ ಖಾನ್ ಅವರು ಉದ್ದನೆಯ ಕೂದಲು ಬಿಟ್ಟಿದ್ದಾರೆ. ಯಾವ ಚಿತ್ರಕ್ಕಾಗಿ ಅವರು ಈ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಭದ್ರತಾ ಸಿಬ್ಬಂದಿಗಳು ಶಾರುಖ್ ಖಾನ್ ಅವರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಒಳಗೆ ಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

 

Font Awesome Icons

Leave a Reply

Your email address will not be published. Required fields are marked *