ಐಲ್ಯಾಂಡ್: ಪೂರ್ವ ಕೆರಿಬಿಯನ್ ದ್ವೀಪದ ಬಳಿ ವಿಮಾನ ಪತನಗೊಂಡು ಸ್ಟಾರ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಮೃತಪಟ್ಟಿದ್ದಾರೆ.
51 ವರ್ಷದ ನಟ ಸಣ್ಣ ವಿಮಾನದ ಮೂಲಕ ಸೇಂಟ್ ಲೂಸಿಯಾಗೆ ಹೋಗುತ್ತಿದ್ದಾಗ ಬೆಕ್ವಿಯಾ ಬಳಿಯ ಐಲ್ಯಾಂಡ್ ಬಳಿ ಪತನವಾಗಿದೆ. 10 ವರ್ಷದ ಮದಿತಾ ಕ್ಲೆಪ್ಸರ್, 12 ವರ್ಷದ ಆನಿಕ್ ಕ್ಲೆಪ್ಸರ್ ಜೊತೆಗೆ ಪೈಲಟ್ ರಾಬರ್ಟ್ ಸ್ಯಾಚ್ಸ್ ಕೂಡ ಸಾವನ್ನಪ್ಪಿದ್ದಾರೆ.
ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಪಘಾತ ಆಗಿರೋದನ್ನು ಅಲ್ಲಿರುವ ಮೀನುಗಾರರು ನೋಡಿದ್ದಾರೆ. ಕೂಡಲೇ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಅಮೆರಿಕದ ಈ ನಟ ಮೂಲತಃ ಜರ್ಮನ್. 2008ರಲ್ಲಿ ತೆರೆ ಕಂಡಿದ್ದ ಸ್ಪೀಡ್ ರೇಸರ್ ಚಿತ್ರವು ಸಾಕಷ್ಟು ಮೈಲೇಜ್ ತಂದುಕೊಟ್ಟಿತ್ತು. ದಿ ಗುಡ್ ಜರ್ಮನ್, ಸೇವ್ಡ್ ಬೈ ದಿ ಬೆಲ್: ದಿ ನ್ಯೂ ಕ್ಲಾಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
Así cayó la avioneta donde viajaba El actor Christian Oliver y sus dos hijas pequeñas
pic.twitter.com/4Yhz23fyzK— KPININI (@kpininimemes) January 5, 2024