ವೀಸಾ ಸಿಗದೆ ಟೆಸ್ಟ್ ನಿಂದ ಹೊರಗುಳಿದ ಬಶೀರ್: ಬ್ರಿಟನ್ ಪ್ರಜೆಗಳ ವಿಷಯದಲ್ಲಿ ಹೀಗಾಗದಿರಲಿ

ಬ್ರಿಟನ್: ಜ.೨೫ರಿಂದ ನಡೆಯಲಿರುವ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದು ಇಳಿಯಬೇಕಿದ್ದ ಇಂಗ್ಲಂಡ್ ತಂಡದ ಸ್ಪಿನ್ನರ್ ಶೋಯೆಬ್ ಬಶೀರ್ ವೀಸಾ ಸಿಗದೆ ತವರಿಗೆ ಮರಳಿದ್ದಾರೆ. ಅದುದಾಬಿಯಲ್ಲಿ ತರಬೇತಿ ಶಿಬಿರದ ನಂತರ ಭಾರತಕ್ಕೆ ಹಾರಿದ ಇಂಗ್ಲಂಡ್ ತಂಡದಿಂದ ಬಶೀರ್ ಹೊರಗುಳಿದ್ದಾರೆ.

ಪಾಕಿಸ್ತಾನ ಮೂಲದ ೨೦ ವರ್ಷದ ಸ್ಪಿನ್ನರ್ ಆಗಿರುವ ಶೋಯೆಬ್ ಬಶೀರ್ ಗೆ ಹೀಗಾಗಿರುವ ಕುರಿತು ಇಂಗ್ಲಂಡ್‌ ತಂಡದ ನಾಯಕ ಬೆನ್ ಸ್ಟೋಕ್ಸ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿ, ವೀಸಾ ಸಮಸ್ಯೆ ಬೇಗ ಸರಿಹೋಗಲಿ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಯು.ಕೆ ಪ್ರಧಾನಿ ರಿಷಿ ಸುನಕ್ ರ ವಕ್ತಾರ, ಬ್ರಿಟನ್ ಪ್ರಜೆಗಳನ್ನು ಭಾರತ ನ್ಯಾಯಯುತವಾಗಿ ನಡೆಸಿಕೊಳ್ಳುತ್ತದೆಂದು ನಿರೀಕ್ಷಿಸುತ್ತೇವೆ ಎಂದಿದ್ದಾರೆ.

ʼಶೋಯೆಬ್ ಬಶೀರ್ ವಿಷಯದಲ್ಲಿ ನಾನು ಏನೂ ಹೇಳಲಾರೆ. ಆದರೆ ಇಂತಹ ಸಮಸ್ಯೆಯನ್ನು ನಾವೂ ಈ ಮೊದಲು ಎದುರಿಸಿದ್ದೇವೆ. ಬ್ರಿಟನ್ ನಾಗರಿಕರನ್ನು ಭಾರತ ವೀಸಾ ಪ್ರಕ್ರಿಯೆಯಲ್ಲಿ ನ್ಯಾಯಯುತವಾಗಿ ಪರಿಗಣಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆʼ ಎಂದು ಬ್ರಿಟನ್ ವಕ್ತಾರ ಹೇಳಿಕೆ ನೀಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *