ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪರಿಣೀತಿ ಚೋಪ್ರಾ ಹಾಗು ರಾಘವ್ ಚಡ್ಡಾ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಹಾಗೂ ಆಪ್ ನಾಯಕ್ ರಾಘವ್ ಚಡ್ಡಾ ಮದುವೆ ರಾಜಸ್ಥಾನದ ಉದಯಪುರದಲ್ಲಿ ಇಂದು (ಸೆ.24) ಅದ್ದೂರಿಯಾಗಿ ನಡೆದಿದೆ. ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ಈ ಮದುವೆ ನಡೆದಿದೆ. ಸಂಜೆ ವೇಳೆಗೆ ಇಬ್ಬರೂ ಮದುವೆ ಆಗಿದ್ದಾರೆ. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಹಾಜರಾಗಿದ್ದರು.

ಲೀಲ್ಯಾ ಪ್ಯಾಲೇಸ್​ನ ಸರೋವರದ ಮಧ್ಯೆ ಮದುವೆ ಮಂಟಪ ಇದೆ. ಬೋಟ್ ಮೂಲಕ ಈ ಜೋಡಿ ಮಂಟಪಕ್ಕೆ ತೆರಳಿತು. ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮಾಲೆ ಬದಲಾಯಿಸಿಕೊಂಡರು. 4 ಗಂಟೆಗೆ ಈ ಜೋಡಿ ಸಪ್ತಪದಿ ತುಳಿದರು.

ಸೆಲೆಬ್ರಿಟಿ ಮದುವೆ ಎನ್ನುವ ಕಾರಣಕ್ಕೆ ಅನೇಕ ಪ್ರಮುಖರು ಇದರಲ್ಲಿ ಭಾಗಿ ಆಗಿದ್ದರು. ಸಾನಿಯಾ ಮಿರ್ಜಾ, ಹರ್ಭಜನ್ ಸಿಂಗ್, ಮನಿಶ್ ಮಲ್ಹೋತ್ರಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗ್ವಂತ್ ಮಾನ್ ಮೊದಲಾದವರು ಮದುವೆಗೆ ಹಾಜರಿ ಹಾಕಿದ್ದರು.

Font Awesome Icons

Leave a Reply

Your email address will not be published. Required fields are marked *