ಶಂಕಿತ ಉಗ್ರ ಮಾಜ್ ಮುನೀರ್ ಕೈವಾಡ ದೃಢ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರ ಮಾಜ್​ ಮುನೀರ್ ಕೈವಾಡವಿರುವುದು ಧೃಡವಾಗಿದೆ.

ಶಂಕಿತ ಉಗ್ರ ಮಾಜ್​ ಮುನೀರ್ ಎನ್​ಐಎ ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ​ ಮಾರ್ಚ್​ 1 ರಂದು ರಾಮೇಶ್ವರಂ ಕೇಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಇದಾದ ಬೆನ್ನಲ್ಲೇ ಎನ್​ಐಎ ಅಧಿಕಾರಿಗಳು ಮಾರ್ಚ್​ 4ರ ರಾತ್ರಿ ಪರಪ್ಪನ ಅಗ್ರಹಾರ ಸೇರಿದಂತೆ ದೇಶದ 18 ಜೈಲುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲಿಸಿದ್ದರು.

ಈ ಸಮಯದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಶಂಕಿತ ಉಗ್ರ ಮಾಜ್​ ಮುನೀರ್​ನನ್ನು ಎನ್​ಐಎ ಅಧಿಕಾರಿಗಳು ಎಂಟು ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಎನ್​ಐಎ ಅಧಿಕಾರಿಗಳು ಮಾಜ್ ಮುನೀರ್ ಇದ್ದ ಜೈಲು ಕೋಣೆಯನ್ನು ತಪಾಸಣೆ ನಡೆಸಿದಾಗ ನೋಟ್ ಬುಕ್ ಒಂದರಲ್ಲಿ ಕೆಲವು ಕೋಡ್ ವರ್ಡ್‌ ಬರೆಯಲಾಗಿತ್ತು. ಇವುಗಳನ್ನು ಡಿಕೋಡ್ ಮಾಡಿದಾಗ ಎನ್​ಐಎ ಅಧಿಕಾರಿಗಳಿಗೆ, ಕೆಫೆ ಸ್ಫೋಟ ಸಂಬಂಧ ಲಿಂಕ್ ಲಭ್ಯವಾಗಿತ್ತು. ಮಾಜ್ ಮುನೀರ್​ ಜೈಲಿನಲ್ಲಿದ್ದುಕೊಂಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದನು ಎಂಬುವುದು ಬೆಳಕಿಗೆ ಬಂದಿದೆ.

ಮಾಜ್​ ಮುನೀರ್​ ವಿಚಾರಣೆ ನಡೆಸಿದಾಗ ಮುಜಾಮಿಲ್​ ಷರೀಫ್​ನ ಕೈವಾಡವಿರುವುದೂ ತಿಳಿಯಿತು. ಕೂಡಲೆ ಎನ್​ಐಎ ಅಧಿಕಾರಿಗಳು ಮುಜಾಮಿಲ್​ ಷರೀಫ್​ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಆಗ ಮುಜಾಮಿಲ್​ ಷರೀಫ್​ ಮಾಜ್​ ಮುನೀರ್​ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದನು. ಬಳಿಕ ಎನ್​ಐಎ ಅಧಿಕಾರಿಗಳು ಮಾಜ್​ ಮುನೀರ್​ನನ್ನೂ ಬಂಧಿಸಿದರು.

 

 

 

 

Font Awesome Icons

Leave a Reply

Your email address will not be published. Required fields are marked *