ಶವ ಸುಡುವ ಜಾಗದಲ್ಲಿ ಚಳಿ ಕಾಯಿಸಿದ ವೃದ್ಧ;ವಿಡಿಯೋ ವೈರಲ್

ಉತ್ತರ ಪ್ರದೇಶ: ಕೊರೆಯುತ್ತಿರುವ ಚಳಿಯಿಂದಾಗಿ ತನ್ನನ್ನು ರಕ್ಷಿಸಿಕೊಳ್ಳಲು‌ ವೃದ್ಧರೊಬ್ಬರು ಶವ ಸುಡುತ್ತಿರುವ ಜಾಗದಲ್ಲಿ ಮಲಗಿರುವ ಘಟನೆಯ ದೃಶ್ಯ ವೈರಲ್​ ಆಗಿದೆ.

ಕಾನ್ಪುರದ ಭೈರವ್ ಘರ್ ಸ್ಮಾಶನದಲ್ಲಿ ಈ ಘಟನೆ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡ್ತಿದೆ. ಅಸಹಾಯಕ ವೃದ್ಧನ ಬಡತನದ ಮೇಲೆ ಪ್ರಶ್ನೆ ಉದ್ಭವವಾಗಿದ್ದು ಉತ್ತರ ಪ್ರದೇಶ ಸರ್ಕಾರ ಬಡವರಿಗೆ, ನಿರಾಶ್ರತರಿಗೆ ಸರಿಯಾದ ಆಶ್ರಯ ಒದಗಿಸುವಲ್ಲಿ ವಿಫಲವಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ.

ಇನ್ನು ದೃಶ್ಯದಲ್ಲಿ ಕಂಡುಬಂಡಂತೆ ಸುತ್ತಲೂ ಶವ ಸುಟ್ಟಿರುವ ಕುರುಹುಗಳಿದ್ದು, ಅದರ ನಡುವೆ ವೃದ್ಧ ಚಳಿ ನಿವಾರಿಸಿಕೊಳ್ಳಲು ಮತ್ತು ನಿದ್ರಿಸುತ್ತಿರಿವುದು ಕಂಡುಬಂದಿದೆ.

Font Awesome Icons

Leave a Reply

Your email address will not be published. Required fields are marked *