ಶಾರುಖ್​ ಖಾನ್​ ಅವರ ಬಹು ನಿರೀಕ್ಷಿತ “ಡಂಕಿ” ಚಿತ್ರದ ಟ್ರೇಲರ್​ ರಿಲೀಸ್

ಪಠಾಣ್​, ಜವಾನ್​ ಯಶಸ್ಸಿನ ಬಳಿಕ ಶಾರುಖ್​ ಖಾನ್​ ಅವರ ಮೂರನೆಯ ಚಿತ್ರ ಡಂಕಿಯ ಟ್ರೇಲರ್​ ಇಂದು ರಿಲೀಸ್​ ಆಗಿದೆ. ಕಳೆದ ನವೆಂಬರ್​ 2ರಂದು ಶಾರುಖ್​ ಅವರ ಹುಟ್ಟುಹಬ್ಬದಂದು ಟೀಸರ್​ ರಿಲೀಸ್​ ಆಗಿತ್ತು. ಟೀಸರ್ ಕೈಬಿಟ್ಟ ನಂತರ, ಶಾರುಖ್ ಖಾನ್ ಅವರ ಅಭಿಮಾನಿಗಳು ಅದರ ಬಗ್ಗೆ ಉತ್ಸುಕರಾಗಿದ್ದರು.

ಇದೀಗ ಟ್ರೇಲರ್​ ಬಿಡುಗಡೆಯಾದ ಬಳಿಕವಂತೂ ಚಿತ್ರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಠಾಣ್​ ಮತ್ತು ಜವಾನ್ ನಂತರ ನಟನ ಮುಂದಿನ ಬ್ಲಾಕ್​ಬಸ್ಟರ್​ ಚಿತ್ರ ಡಂಕಿ ಎಂದೇ ಎಲ್ಲೆಡೆ ಹೇಳಲಾಗುತ್ತಿದೆ. ಶಾರುಖ್ ಖಾನ್ ಅವರ ಹಿಂದಿನ ಚಿತ್ರಗಳಾದ ಪಠಾಣ್​ ಮತ್ತು ಜವಾನ್ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿವೆ.

ಡಂಕಿ ಚಿತ್ರದ ಟೀಸರ್​ನಲ್ಲಿ ಶಾರುಖ್ ಪಾತ್ರದ ಪರಿಚಯ ಇತ್ತು. ಹಾರ್ಡಿ ಅನ್ನೋದು ಶಾರುಖ್ ಪಾತ್ರದ ಹೆಸರಾಗಿದೆ. ಹಾರ್ಡಿ ತನ್ನ ಗೆಳೆಯರ ಬಗ್ಗೆ ಇರೋ ಪ್ರೀತಿಯನ್ನ ಇಲ್ಲಿ ವ್ಯಕ್ತಪಡಿಸುತ್ತಾನೆ. ಇದು ಪಂಜಾಬ್​ನ ಕಥೆಯಾಗಿದೆ. ಹಾರ್ಡಿ (ಶಾರುಖ್​ ಖಾನ್) ಮತ್ತು ಅವನ ಸ್ನೇಹಿತರಾದ ಮನು, ಸುಖಿ, ಬುಗ್ಗು ಮತ್ತು ಬಲ್ಲಿ ಅವರ ಪ್ರಪಂಚವನ್ನು ಇದು ತಿಳಿಸುತ್ತದೆ. ಮನು ಮತ್ತು ಸುಖಿ ಪಾತ್ರಗಳನ್ನು ಕ್ರಮವಾಗಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ನಿರ್ವಹಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *