ಶಾಶ್ವತವಾಗಿ ಇತಿಹಾಸದ ಪುಟ ಸೇರಲಿದೆಯೇ ಕೆಜಿಎಫ್ ಚಿನ್ನದ ಗಣಿ

ಕೋಲಾರ: ಜಿಲ್ಲೆಯ ರಾಬರ್ಟ್‌ಸನ್‌ಪೇಟೆ ತಾಲೂಕಿನಲ್ಲಿರುವ ಈ ಚಿನ್ನದ ಗಣಿ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಚಿನ್ನದ ಗಣಿಯಾಗಿದೆ. ಜಿಲ್ಲಾ ಕೇಂದ್ರದಿಂದ ಇದು ಸುಮಾರು 30 ಕಿ.ಮೀ. ದೂರದಲ್ಲಿದ್ದು, ಇದನ್ನು 17-18 ನೇ ಶತಮಾನದ ನಡುವೆ ಪ್ರಾರಂಭಿಸಲಾಗಿತ್ತು. ಆ ನಂತರ 121 ವರ್ಷಗಳಲ್ಲಿ ಇಲ್ಲಿಂದ 900 ಟನ್ ಚಿನ್ನವನ್ನು ಹೊರತೆಗೆಯಲಾಗಿದೆ. ಈ ಕೆಜಿಎಫ್ ಚಿನ್ನದ ಗಣಿ ದೇಶದ ಅತ್ಯಂತ ಹಳೆಯ ಚಿನ್ನದ ಗಣಿಗಳಲ್ಲಿ ಒಂದಾಗಿದೆ. ಆದರೆ ಇದೀಗ ಶಾಶ್ವತವಾಗಿ ಇತಿಹಾಸದ ಪುಟ ಸೇರಲಿದೆ ಅಂತೆ ಕೆಜಿಎಫ್ ಚಿನ್ನದ ಗಣಿ.

ಹೌದು. . ಚಿನ್ನದ ಗಣಿಯ ಕೇಂದ್ರದ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಪುನರಾರಂಭಕ್ಕೆ ಕೇಂದ್ರ ನಿರಾಸಕ್ತಿ ತಾಳಿದೆ. ರಾಜ್ಯ ಸರ್ಕಾರಕ್ಕೆ ಭೂಮಿಯನ್ನು ಹಿಂತಿರುಗಿಸುವ ಪ್ರಕ್ರಿಯೆಯನ್ನೂ ಕೇಂದ್ರ ಗಣಿ ಇಲಾಖೆ ಆರಂಭಿಸಿದೆ. 2001 ರ ಫೆಬ್ರವರಿಯಲ್ಲಿ ಕೆಜಿಎಫ್ ಚಿನ್ನದ ಗಣಿಗೆ ಅಧಿಕೃತವಾಗಿ ಬೀಗ ಹಾಕಲಾಗಿತ್ತು. ನಂತರ ಚಿನ್ನದ ಗಣಿ ಪುನರಾರಂಭ ಮಾಡುವ ಬಗ್ಗೆ ಸತತ 22 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ, ಈಗ ಅದೂ ಕೊನೆಗೊಂಡಿದೆ.

ಕೆಜಿಎಫ್​ ಚಿನ್ನದ ಗಣಿಯ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಗುತ್ತಿಗೆ ಅವಧಿ 2023ರ ಆಗಸ್ಟ್​​ಗೆ ಮುಕ್ತಾಯವಾಗಲಿದೆ. ಹೀಗಾಗಿ 12,500 ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರಕ್ಕೆ ಹಿಂದುರುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಧ್ಯೆ, ಚಿನ್ನದ ಅದಿರು ತೆಗೆದು ಹಾಕಲಾಗಿರುವ ಸೈನೆಡ್ ಮಿಶ್ರಿತ ಮಣ್ಣಿನ ಗುಡ್ಡಗಳನ್ನು ಶೋಧಿಸಿ ಚಿನ್ನ ತೆಗೆಯಲು ಕೇಂದ್ರ ಸರ್ಕಾರ ಗ್ಲೋಬಲ್ ಟೆಂಡರ್ ಕರೆದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Font Awesome Icons

Leave a Reply

Your email address will not be published. Required fields are marked *