ಶಿವರಾಜ್ ಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಘೋಸ್ಟ್’ ಚಿತ್ರೀಕರಣವನ್ನು ಮಂಗಳವಾರ ಪೂರ್ಣಗೊಳಿಸಿದ್ದು, ದಸರಾಗೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶ್ರೀನಿ ಅವರು ಹೇಳಿದ್ದಾರೆ.

‘ಘೋಸ್ಟ್’ ಚಿತ್ರದ ಚಿತ್ರೀಕರಣ ಮುಗಿಸಿದ ಶ್ರೀನಿ, ತಮ್ಮ ಮುಂದಿನ ಥ್ರಿಲ್ಲರ್ ಸಿನಿಮಾ ಬೀರ್​ಬಲ್ 2 ನ ಕೆಲವು ಭಾಗಗಳನ್ನು ಸಹ ಚಿತ್ರೀಕರಿಸಿದ್ದಾರೆ. ಅಲ್ಲದೇ ಘೋಸ್ಟ್ ಚಿತ್ರದಲ್ಲಿ ಬೀರ್​ಬಲ್​ ಚಿತ್ರದ ಪಾರ್ಟ್​-2 ಹಿಂಟ್ ಕೂಡ ಬಿಟ್ಟುಕೊಡಲಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
Font Awesome Icons

Leave a Reply

Your email address will not be published. Required fields are marked *