ಶಿವರಾಜ್ ಕುಮಾರ್ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು, ನನ್ನ ಹೆಂಡತಿ ಗೆಲ್ಲಿಸಿ. ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾಶಿವರಾಜ್ ಕುಮಾರ್ ಪರ ಪತಿ ಡಾ.ಶಿವರಾಜ್ ಕುಮಾರ್ ಮತಯಾಚಿಸಿದರು.

ಅವರು ನಗರದ ಸಿದ್ದೇಶ್ವರದ 14 ನೇ ವಾರ್ಡ್ ನಲ್ಲಿ ಚುನಾವಣ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿ ಗೀತಾ ಶಿವರಾಜ್ ಕುಮಾರ್ ಪರ ಮತಯಾಚನೆ ಮಾಡಿದರು. ಗೀತಾ ಗೆದ್ರೆ ನಾನೂ ಕೆಲಸ ಮಾಡ್ಸೆ ಮಾಡಿಸುತ್ತೇನೆ ಎಂದರು.

ನನ್ನ ಹೆಂಡತಿಗೆ ನಾನೇ ಗ್ಯಾರೆಂಟಿ. ನನ್ನ ಹೆಂಡತಿ ಕೆಲಸ ಮಾಡುತ್ತಾಳೆ ಎಂದು ನಾನು ಗ್ಯಾರೆಂಟಿ ಕೊಡುತ್ತೇನೆ. ಹೆಣ್ಣುಮಕ್ಕಳು ಎಲ್ಲ ರಂಗದಲ್ಲೂ ಇದ್ದಾರೆ. ಕೂಲಿ ಕೆಲಸದಿಂದ ಫ್ಲೈಟ್ ಓಡಿಸುವ ವರೆಗೂ ಹೆಣ್ಣು ಇದ್ದಾರೆ. ಕೆಲವರು ಅವರ ಮನೆ ಎಲ್ಲಿ ಎಂದು ಕೇಳುತ್ತಾರೆ.

ಗೀತಾ ಹುಟ್ಟಿ ಬೆಳೆದಿದ್ದು ಇಲ್ಲೇ, ಇಲ್ಲೇ ಹುಟ್ಟಿ ಬೆಳದ ಮೇಲೆ ಅವರ ಮನೆಯೂ ಇಲ್ಲೇ ಇರತ್ತೆ. ಇಲ್ಲೇ ಮನೆ ಇರಬೇಕು ಎಂದು ಇಲ್ವಲ್ಲ ಎಂದು ವಿರೋಧಿಗಳಿಗೆ ಶಿವರಾಜ್ ಕುಮಾರ್ ಖಡಕ್ ವಾರ್ನಿಂಗ್ ನೀಡಿದರು.‌

ವಿಪಕ್ಷಗಳು ಇವರು ಹೊರಗಿನ ಜಿಲ್ಲೆಯವರು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿಬಿಟ್ಟ ನಂತರ ಶಿವಮೊಗ್ಗದಲ್ಲಿ ಶಿವಣ್ಣ ಮೊದಲಬಾರಿಗೆ ರಾಜಕೀಯ ಹೇಳಿಕೆ ಕೊಟ್ಟಿರುವುದು ಸಹ ಮೊದಲಬಾರಿಗೆ ಎಂಬುದನ್ನ ಮರೆಯುವ ಹಾಗಿಲ್ಲ ಎಂದರು.

Font Awesome Icons

Leave a Reply

Your email address will not be published. Required fields are marked *