ಮಂಗಳೂರು: ಚುನಾವಣೆ ಹಿನ್ನಲೆ ಗೂಂಡಾಕಾಯ್ದೆಯಡಿಯಲ್ಲಿ ಹಿಂದೂ ಕಾರ್ಯಕರ್ತ ಜಯಪ್ರಶಾಂತ್ ಬಂಧನವಾಗಿದೆ. ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ಅಖಾಡಕ್ಕಿಳಿದಿದೆ.
ಹಿಂದುತ್ವದ ಪರ ಕೆಲಸ ಮಾಡುವ ನಮ್ಮ ಕಾರ್ಯಕರ್ತನ ಮೇಲೆ ಗೂಂಡಾಕಾಯ್ದೆ ಹಾಕಲಾಗಿದೆ. ಒಂದು ಕೇಸ್ ಗೆ ಮೂರು ಎಫ್ ಐ ಆರ್ ದಾಖಲಿಸಿದ್ದಾರೆ. ಈ ಹಿಂದೆ ಸೆಗಣಿ ಹಾಕಿದ್ದಕ್ಕೆ ಪ್ರದೀಪ್ ಪಂಪವೆಲ್ ಎಂಬವನ ಮೇಲೆ 307 ಸೆಕ್ಷನ್ ಹಾಕಿದ್ದಾರೆ. ಸೆಕ್ಷನ್ ಹಾಕಿದ ಪೊಲೀಸರು ನೂರಕ್ಕೆ ನೂರು ಸರಿಯಾಗಿ ಸೆಕ್ಷನ್ ಹಾಕಿಲ್ಲ.
ಚುನಾವಣೆಯ ಸಂದರ್ಭ ನಮ್ಮನ್ನ ಧಮನ ಮಾಡುವ ಕೆಲಸ ನಡೆಯುತ್ತಿದೆ. ಕಳೆದ ಚುನಾವಣೆ ಸಂದರ್ಭ ಕಾಂಗ್ರೆಸ್ ನವರು ಬಜರಂಗದಳ ಬ್ಯಾನ್ ಎಂದು ಸುಳ್ಳು ಹೇಳಿದ್ರು. ಇದರಿಂದ ಅಲ್ಪಸಂಖ್ಯಾತರ ಮತ ಸಿಗುತ್ತೆ ಎಂಬ ಯೋಚನೆ. ಬಜರಂಗದಳ ಕಾರ್ಯಕರ್ತರನ್ನ ಬಂಧಿಸಿದ್ರೆ ಅಲ್ಪ ಸಂಖ್ಯಾತರು ಮತ ಹಾಕ್ತಾರೆ ಎಂಬ ಭ್ರಮೆ. ಈ ಕಾರಣಕ್ಕೆ ನಮ್ಮನ್ನ ಚುನಾವಣೆ ಸಂದರ್ಭ ಧಮನ ಮಾಡುವ ಕೆಲಸ ನಡೆಯುತ್ತಿದೆ. ಪಾಕಿಸ್ತಾನ ಪರ ಘೋಷಣೆ ಹಾಕಿದವರಿಗೆ ಕೇಸ್ ಹಾಕಲ್ಲ.
ಜೈ ಶ್ರೀ ರಾಮ್, ಹನುಮಾನ್ ಚಾಲೀಸಾ ಹೇಳೋಕೆ ಇಲ್ಲ ಕೇಸ್ ಹಾಕ್ತಾರೆ. ಹಾಗಾಗಿ ನಮಗೆ ಹಿಂದೂಗಳ ಪರವಾದ ಸರಕಾರ ಬೇಕು. ನಾವು ಈ ಬಾರಿ ಮನೆಗೆ ಮನೆಗೆ ಹೋಗಿ ಪ್ರಚಾರ ಮಾಡುತ್ತೇವೆ. ನಮ್ಮ ಕೇಂದ್ರದ ಬೈಠಕ್ ನಲ್ಲೂ ಈ ಬಗ್ಗೆ ತೀರ್ಮಾನವಾಗಿದೆ. ಈ ಕಾರಣಕ್ಕೆ ನಾವು ಹಿಂದುತ್ವದ ಪರವಾದ ಸರಕಾರವನ್ನ ಗೆಲ್ಲಿಸುತ್ತೇವೆ. ನಮ್ಮದು ಗೊ ಹತ್ಯೆ, ಡ್ರಗ್ಸ್, ಹೆಣ್ಣು ಮಕ್ಕಳನ್ನ ಕೆಡಿಸುವ ಸಂಘಟನೆಯಲ್ಲ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಖಂಡ ಶಿವಾನಂದ ಮೆಂಡನ್ ಹೇಳಿಕೆ ನೀಡಿದ್ದಾರೆ.