ಶೀಘ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ?

ಮುಂಬೈ:  ಸೆಲೆಬ್ರಿಟಿ ದಂಪತಿಗಳ ಮಧ್ಯೆ ವೈಮನಸ್ಸು ಮೂಡುವುದು, ಅವರು ವಿಚ್ಛೇದನ ಪಡೆಯುವುದು ಹೊಸದಲ್ಲ. ಈಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ಇದೇ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಇವರು ವಿಚ್ಛೇದನ ಪಡೆಯಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ.

ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಹಲವು ದಿನಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಐಶ್ವರ್ಯಾ ರೈ ಹುಟ್ಟುಹಬ್ಬವಿತ್ತು. ಆಗ ಐಶ್ವರ್ಯಾ ಜೊತೆಗಿದ್ದಿದ್ದು ಅವರ ತಾಯಿ ಮತ್ತು ಮಗಳು ಮಾತ್ರ. ಅವರ ಬರ್ತ್​ಡೇ ದಿನ ಅಭಿಷೇಕ್ ಅವರು ಐಶ್ವರ್ಯಾ ಅವರ ಫೋಟೋನ ಗೂಗಲ್​ನಲ್ಲಿ ಹುಡುಕಿ ಡೌನ್​ಲೋಡ್​ ಮಾಡಿ ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್​ಡೇ ಎಂದಷ್ಟೇ ಬರೆದಿದ್ದರು. ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇಬ್ಬರು ಎಂಗೇಜ್‌ ಮೆಂಟ್‌ ರಿಂಗ್‌ ಕೂಡ ಧರಿಸದೇ ಇತ್ತಿಚೇಗೆ ಪಾರ್ಟಿವೊಂದರಲ್ಲಿ ಅಭಿಷೇಕ್‌ ಕಾಣಿಸಿಕೊಂಡಿದ್ದರು. ಈ ಎಲ್ಲಾ ಕಾರಣಗಳಿಂದ ವಿಚ್ಚೇದನ ವಿಚಾರ ಸಖತ್‌ ಸೌಂಡ್‌ ಮಾಡುತ್ತಿದೆ.

ಸ್ವಘೋಷಿತ ಚಿತ್ರ ವಿಶ್ಲೇಷಕ ಉಮೈರ್ ಸಂಧು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಐಶ್ವರ್ಯಾ-ಅಭಿಷೇಕ್ ವಿಚ್ಛೇದನದ ಬಗ್ಗೆ ಬರೆದುಕೊಂಡಿದ್ದರು. ‘ಅಭಿಷೇಕ್-ಐಶ್ವರ್ಯಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ’ ಎಂದು ಉಮೈರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಪೋಸ್ಟ್ ಮಾಡುವ ಬಹುತೇಕ ಎಲ್ಲಾ ಟ್ವೀಟ್​ಗಳು ಫೇಕ್ ಆಗಿರುತ್ತವೆ.

Font Awesome Icons

Leave a Reply

Your email address will not be published. Required fields are marked *