ಶ್ರೀಕೃಷ್ಣನ ಮೂರ್ತಿಯನ್ನು ಮದುವೆಯಾದ ಯುವತಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಮಧ್ಯಪ್ರದೇಶ: ಮಹಿಳೆಯೊಬ್ಬಳು ಶ್ರೀಕೃಷ್ಣನ ಮೂರ್ತಿಯನ್ನೇ ವಿವಾಹವಾದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಈಕೆ ಬಾಲ್ಯದಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬೆಳೆದವಳು. ಕೃಷ್ಣನ ಮೇಲಿರುವ ಪ್ರೀತಿಯನ್ನು ಕಂಡು ಪ್ರಾರಂಭದಲ್ಲಿ ಪೋಷಕರು ಮತ್ತು ಸಂಬಂಧಿಕರು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಎಲ್ಲರನ್ನೂ ಒಪ್ಪಿಸಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ಶ್ರೀಕೃಷ್ಣನ ಮೂರ್ತಿಯನ್ನು ವಿವಾಹವಾಗಿದ್ದಾಳೆ.

ಗ್ವಾಲಿಯರ್ ನಗರದ ನ್ಯೂ ಬ್ರಜ್ ವಿಹಾರ್ ಕಾಲೋನಿಯ ಶಿವಾನಿ ಪರಿಹಾರ್ (23) ಮದುವೆಯಾದ ಯುವತಿ. ತಂದೆ ರಾಮ್ ಪ್ರತಾಪ್ ಪರಿಹಾರ್ ಮತ್ತು ತಾಯಿ ಮೀರಾ ಪರಿಹಾರ್.

ಏಪ್ರಿಲ್ 15ರಂದು ಶಿವಾನಿ ಮದುವೆ ಸಂಭ್ರಮ ಶುರುವಾಗಿತ್ತು. ಮೊದಲ ದಿನ 16 ರಂದು ಮಂಟಪಕ್ಕೆ ಹಳದಿ ಹೂ ಹಾಕುವ ಕಾರ್ಯಕ್ರಮ, ಏಪ್ರಿಲ್ 17 ರಂದು ಮದುವೆ ಮೆರವಣಿಗೆ ಮತ್ತು ಏಪ್ರಿಲ್ 18 ರಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮದುವೆ ನಡೆಯಿತು.

 

Font Awesome Icons

Leave a Reply

Your email address will not be published. Required fields are marked *