ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಪೊಲೀಸ್‌ ವಶಕ್ಕೆ

ಚಿಕ್ಕಮಗಳೂರು: ಮುಂಜಾಗ್ರತಾ ಕ್ರಮವಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮೋದ್ ಮುತಾಲಿಕ್ಹಾಗೂ ಗಂಗಾಧರ ಕುಲಕರ್ಣಿಯನ್ನು ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಶ್ರೀರಾಮಸೇನೆಯು ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ಸರ್ವೆ ನಂ 57 ರ ಜನ್ನತ್ ನಗರದಲ್ಲಿರುವ ದರ್ಗಾದಲ್ಲಿ ದತ್ತಜಯಂತಿಯ ಹೊಸ ಆಚರಣೆಗೆ ಮುಂದಾಗಿತ್ತು. ದತ್ತಜಯಂತಿ ಆಚರಣೆಯ ಕರೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಯನ್ನು ವಶಕ್ಕೆ ಪಡೆಲಾಗಿದೆ. ಬಳಿಕ ಗೌಪ್ಯ ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *