ಶ್ವಾನ ಪ್ರಿಯರೇ ಹುಷಾರ್: ತನ್ನ ಮಾಲೀಕನಿಗೆ 60 ಕಡೆ ಕಚ್ಚಿ ಮಾಂಸ ತಿಂದ ಸಾಕು ನಾಯಿ !

‌ಗ್ವಾಲಿಯರ್​: ರೊಟ್ವೀಲರ್​ ಜಾತಿಗೆ ಸೇರಿದ ಸಾಕುನಾಯಿಯೊಂದು ತನ್ನ ಮಾಲೀಕನನ್ನೇ ಕಚ್ಚಿರುವ ಘಟನೆ ಗ್ವಾಲಿಯರ್​ನಲ್ಲಿ ನಡೆದಿದೆ. ಮಾಲೀಕನಿಗೆ 60 ಕಡೆ ನಾಯಿ ಕಚ್ಚಿದ್ದು ಮಾಂಸವನ್ನು ಕಿತ್ತು ತಿಂದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೋಮವಾರ ತಡರಾತ್ರಿ ದಾಳಿ ನಡೆದಿದೆ. ಮನೆ ಮಾಲೀಕ ಸಂಜೆ ನಾಯಿಗೆ ಆಹಾರ ನೀಡುವುದು ಮರೆತಿದ್ದ, ಮಧ್ಯರಾತ್ರಿ ನೆನಪಾಗಿ ಆಹಾರ ನೀಡಲು ಹೋದಾಗ ಹಸಿದಿದ್ದ ನಾಯಿ ಮಾಲೀಕನ ಮೇಲೆ ದಾಳಿ ನಡೆಸಿದೆ.

ಇನ್ನು ಹಸಿದ ರೊಟ್ವೀಲರ್ ಸಿಟ್ಟಿಗೆದ್ದು ತನ್ನ ಮಾಲೀಕರನ್ನು ಕಚ್ಚಲು ಪ್ರಾರಂಭಿಸಿತ್ತು. ತೇಜೇಂದ್ರ ಘೋರ್ಪಡೆ ಎಂಬ ವ್ಯಕ್ತಿಯನ್ನು ಅವರ ಮಗ ಹೇಗೋ ರಕ್ಷಣೆ ಮಾಡಿದ್ದಾರೆ.
ಸಮಯೋಚಿತ ಹಸ್ತಕ್ಷೇಪದ ಹೊರತಾಗಿಯೂ, ಘೋರ್ಪಡೆಗೆ 60 ಕ್ಕೂ ಹೆಚ್ಚು ಆಳವಾದ ಗಾಯಗಳಾಗಿವೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 

Font Awesome Icons

Leave a Reply

Your email address will not be published. Required fields are marked *