ಮುಂಬೈ: ಪ್ಯಾನ್ ಇಂಡಿಯಾ ಹೀರೋ ಆಗಿರುವ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಸಿನಿಮಾ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಈ ಮಧ್ಯೆ ಅವರ ನಟನೆಯ ‘ರಾಮಾಯಣ’ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ. ಈ ಚಿತ್ರಕ್ಕಾಗಿ ಅವರು ಸಂಭಾವನೆ ಪಡೆಯದೇ ಇರಲು ನಿರ್ಧರಿಸಿದ್ದಾರೆ. ಇದರ ಬದಲು ಅವರು ನಿರ್ಮಾಪಕರಾಗುತ್ತಿದ್ದಾರೆ.
‘ರಾಮಾಯಣ’ ಸಿನಿಮಾಗಾಗಿ ಯಶ್ ಅವರು 80 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ನಿರ್ಮಾಪಕರು ಕೊಡಲು ಒಪ್ಪಿದ್ದಾರೆ. ಯಶ್ ಸಂಭಾವನೆ ತೆಗೆದುಕೊಂಡಿಲ್ಲ. ಬದಲಿಗೆ ಆ 80 ಕೋಟಿ ರೂಪಾಯಿನ ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಕೋರಿದ್ದಾರೆ. ಈ ಮೂಲಕ ಸಿನಿಮಾದ ನಿರ್ಮಾಪಕರಲ್ಲಿ ತಾವೂ ಒಬ್ಬರಾಗಿದ್ದಾರೆ.
ರಣಬೀರ್ ಕಪೂರ್ ಅವರು ಈಗಾಗಲೇ ತಮ್ಮ ಪಾಲಿನ ಸಂಭಾವನೆ 75 ಕೋಟಿ ರೂಪಾಯಿಯನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಈ ಮೊದಲು ಅವರು ಪ್ರತಿ ಸಿನಿಮಾಗೆ 30-35 ಕೋಟಿ ರೂಪಾಯಿ ಪಡೆಯುತ್ತಿದ್ದರು. ಆದರೆ, ‘ರಾಮಾಯಣ’ ಚಿತ್ರಕ್ಕಾಗಿ ಅವರು ಡಬಲ್ ಸಂಭಾವನೆ ಪಡೆದಿದ್ದಾರೆ. ಸಾಯಿ ಪಲ್ಲವಿ ಅವರು 6 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ, ‘ರಾಮಾಯಣ’ ಸಿನಿಮಾಗೆ ಈಗಾಗಲೇ ಶೂಟಿಂಗ್ ಆರಂಭ ಆಗಿದೆ. ಮುಂಬೈನ ಸ್ಟುಡಿಯೋ ಒಂದರಲ್ಲಿ ದೊಡ್ಡ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ.