ಸದಸನದಲ್ಲಿʼ ಮ್ಯೂಟ್‌ ʼ ಆಗುವ ಬಿಜೆಪಿ ಸಂಸದರಿಗೆ ಈ ಬಾರಿ ಜನತೆ ತಕ್ಕ ಪಾಠ ಕಲಿಸುವರು . » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ಏ. 11, 2024 : (www.justkannada.in news)  ಕರ್ನಾಟಕ ರಾಜ್ಯದ ಬಗ್ಗೆ ಮಲತಾಯೊ ಧೋರಣೆ ಹೊಂದಿರುವ ಕೇಂದ್ರ ಸರಕಾರಕ್ಕೆ ಈ ಬಾರಿ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ವಿಶ್ವಾಸವಿಟ್ಟು ಕಳೆದ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ನೀಡಿದ್ದ ರಾಜ್ಯದ ಜನ ಈಗ ಭ್ರಮನಿರಸನಗೊಂಡಿದ್ದಾರೆ.

ಮೈಸೂರಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಹೇಳಿದಿಷ್ಟು..

ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಹೆಚ್ಚು ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದರು. ಆದರೆ ರಾಜ್ಯದಿಂದ ಆಯ್ಕೆಯಾದ ಯಾವೊಬ್ಬ ಸಂಸದನು ಸಂಸತ್ತಿನಲ್ಲಿ ರಾಜ್ಯದ ಬಗ್ಗೆ, ರಾಜ್ಯದ ಜನರ ಪರವಾಗಿ ದನಿ ಎತ್ತುವ ಕೆಲಸ ಮಾಡಲಿಲ್ಲ. ಬದಲಿಗೆ ಸದನದಲ್ಲಿ ಮೂಕರಂತೆ ಮೌನವಾಗಿದ್ದರು. ಆ ಮೂಲಕ ರಾಜ್ಯದ ಜನತೆಗೆ ಅಪಮಾನ ಮಾಡಿದರು.

ಇದಕ್ಕೆ ಪೂರಕ ಎಂಬಂತೆ ಪ್ರಧಾನಿ ಮೋದಿ ಸಹ ಕರ್ನಾಟಕದ ಜನ ಸಂಕಷ್ಠಕ್ಕೆ ಸಿಲುಕಿದಾಗ ರಕ್ಷಣೆಗೆ ಬರಲಿಲ್ಲ. ಸಹಾಯ ಹಸ್ತ ಚಾಚಲಿಲ್ಲ. ಬದಲಿಗೆ ಚುನಾವಣೆ ವೇಳೆ ಮತಯಾಚನೆಗೆ ಸಭೆ, ಸಮಾರಂಭ ನಡೆಸಿದರು. ಆದರೆ ಈ ರ್ಯಾಲಿಗಳು ರಾಜ್ಯದ ಜನತೆ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಎಂಬುದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲೂ  ಕನ್ನಡಿಗರು ಕೇಂದ್ರ ಸರಕಾರಕ್ಕೆ ತಕ್ಕ ಪಾಠ ಕಲಿಸುವರು. ವಿಧಾನಸಭಾ ಚುನಾವಣೆಯ ಕಹಿ ಅನುಭವದಿಂದ ಈಗ ಮೋದಿ ಕಾರ್ಯಕ್ರಮಕ್ಕೆ, ಪ್ರಚಾರಕ್ಕೆ ಬೇಡಿಕೆ ಕಡಿಮೆಯಾಗಿದೆ. ಬಿಜೆಪಿ ಅಬ್ಯರ್ಥಿಗಳೇ ಪ್ರಧಾನಿ ರ್ಯಾಲಿ ಆಯೋಜನೆಗೆ ಹಿಂದೇಟು ಹಾಕುತ್ತಿದ್ದಾರೆ.

ಅನ್ಯಾಯದ ಸರಮಾಲೆ :

ಬರಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸರ್ಕಾರ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ನ್ಯಾಯಾಲಯ ಕೂಡ ರಾಜ್ಯಕ್ಕೆ ಆಗಿರುವ ತೊಂದರೆ ಬಗ್ಗೆ ಕೇಂದ್ರ‌ ಸರ್ಕಾರದ ಗಮನಕ್ಕೆ ತಂದಿದೆ.

ಕೇಂದ್ರದ ಜನವಿರೋಧಿ ನಿಲುವಿನಿಂದ ಜನಸಾಮಾನ್ಯರು ಬೇಸತ್ತಿದ್ದಾರೆ. ಎಲ್ಲಾ ಪಕ್ಷದವರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮೂರ್ತಿ, ಸೀತರಾಮು ಮತ್ತಿತರರು ಹಾಜರಿದ್ದರು.

 

Key words : congress, Venkatesh, mute, mps

 

 

Font Awesome Icons

Leave a Reply

Your email address will not be published. Required fields are marked *