ಸದ್ಯಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲ್ಲ ‘ಅನಿಮಲ್’ ಸಿನಿಮಾ

ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಭಾರೀ ಲಾಭ ಗಳಿಸಿದ್ದು, ಇದೀಗ ಒಟಿಟಿಗೆ ಲಗ್ಗೆ ಇಡುವ ವೇಳೆ ತೊಂದರೆ ಮಾಡಿಕೊಂಡಿದೆ.

ಈ ಮೊದಲು ಜ. 26ರಂದು ನೆಟ್​ಫ್ಲಿಕ್ಸ್ ಮೂಲಕ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತಿಳಿಸಿದ್ದರು. ಆದರೆ ಈಗ ಸಮಸ್ಯೆ ಎದುರಾಗಿದೆ. ಅಷ್ಟಕ್ಕೂ ಏನ್ ಸಮಸ್ಯೆ ಅಂತೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಚಿತ್ರವನ್ನು ಟಿ-ಸೀರಿಸ್ ನಿರ್ಮಾಣ ಮಾಡಿದೆ. ಇದರ ಜೊತೆಗೆ ಒಂದಷ್ಟು ಮಂದಿ ಹಣ ಹೂಡಿದ್ದಾರೆ. ಆ ಪೈಕಿ ‘ಸಿನಿ 1 ಸ್ಟುಡಿಯೋಸ್’ ಕೂಡ ಒಂದು. ಲಾಭದಲ್ಲಿ ಸರಿಯಾದ ಪಾಲು ಸಿಕ್ಕಿಲ್ಲ ಎಂದು ಈ ಸಂಸ್ಥೆ ಆರೋಪ ಮಾಡಿದೆ. ಜೊತೆಗೆ ಸಿನಿಮಾ ಒಟಿಟಿ ರಿಲೀಸ್​ಗೆ ತಡೆ ನೀಡಬೇಕು ಎಂದು ಕೋರಿ ಈ ಸಂಸ್ಥೆ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದೆ. ‘ಅನಿಮಲ್ ಸಿನಿಮಾದಿಂದ ಬಂದ ಲಾಭ ಹಾಗೂ ಇತರ ಹಕ್ಕು ಮಾರಾಟದಿಂದ ಬಂದ ಹಣದಲ್ಲಿ ಒಂದೇ ಒಂದು ರೂಪಾಯಿ ಕೂಡ ಸಂಸ್ಥೆಗೆ ಸಿಕ್ಕಿಲ್ಲ. ಬಂದ ಲಾಭದಲ್ಲಿ ಶೇ.35 ನಮಗೆ ನೀಡಬೇಕಿತ್ತು’ ಎಂದು ‘ಸಿನಿ 1 ಸ್ಟುಡಿಯೋಸ್’ ವಕೀಲ ಸಂದೀಪ್ ಸೇಥಿ ಅವರು ಕೋರ್ಟ್​ ಎದುರು ವಾದ ಮಂಡಿಸಿದ್ದಾರೆ. ಟಿ-ಸೀರಿಸ್ ವಕೀಲ ಅಮಿತ್ ಸಿಬಾ ಅವರು ತಮ್ಮ ವಾದ ಮುಂದಿಟ್ಟಿದ್ದಾರೆ. ‘ಸಿನಿ 1 ಯಾವುದೇ ಹೂಡಿಕೆ ಮಾಡಿಲ್ಲ’ ಎಂದಿದ್ದಾರೆ.

ಮುಂದಿನ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸದ್ಯಕ್ಕೆ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದು ಅನುಮಾನವೇ. ಪ್ರಕರಣದ ಇತ್ಯರ್ಥದ ಬಳಿಕ ನಿರೀಕ್ಷಿಸಬಹುದು.

Font Awesome Icons

Leave a Reply

Your email address will not be published. Required fields are marked *