ಸನ್ನಿ ಡಿಯೋಲ್‌ ಮನೆ ಹರಾಜು ನೋಟಿಸ್‌ ವಾಪಸ್‌

ಬಾಲಿವುಡ್‌ನ ಗದರ್ – 2 ಚಿತ್ರ ಇತ್ತೀಚೆಗೆ ಸಿಕ್ಕಾಪಟ್ಟೆ ಯಶಸ್ಸು ಗಳಿಸಿದ್ದು, ಬಾಕ್ಸಾಫೀಸ್‌ನಲ್ಲಿ ಈಗಾಗಲೇ 300 ಕೋಟಿ ರೂ. ಗಳಿಸಿದೆ. ಆದರೂ, ಚಿತ್ರ ನಟ ಸನ್ನಿ ಡಿಯೋಲ್‌ ಮಾಡಿದ ಸಾಲ ತೀರಿಸದ ಕಾರಣ ಅವರ ಮನೆಯನ್ನು ಬ್ಯಾಂಕ್‌ ಹರಾಜಿಗಿಟ್ಟಿತ್ತು. ಆದರೆ, 56 ಕೋಟಿ ರೂಪಾಯಿಗಳನ್ನು ಹಿಂಪಡೆಯಲು ಜುಹೂದಲ್ಲಿರುವ ಬ್ಲಾಕ್ ಸನ್ನಿ ಡಿಯೋಲ್ ಅವರ ಐಷಾರಾಮಿ ವಿಲ್ಲಾವನ್ನು ಇ-ಹರಾಜಿಗೆ ಇಟ್ಟಿತ್ತು. ಆದರೆ, ಸದ್ಯ ಹರಾಜನ್ನು ಹಿಂಪಡೆಯಲಾಗಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಆಗಸ್ಟ್ 25 ರಂದು ನಡೆಯಲಿರುವ ಇ-ಹರಾಜಿನ ಮೂಲಕ 56 ಕೋಟಿ ರೂಪಾಯಿಗಳನ್ನು ಹಿಂಪಡೆಯಲು ಪ್ಲ್ಯಾನ್‌ ಮಾಡಿತ್ತು. ಆದರೆ, ಸದ್ಯ ಇ – ಹರಾಜು ಪ್ರಕ್ರಿಯೆಯ ನೋಟಿಸ್‌ ಅನ್ನು ಹಿಂಪಡೆದಿದೆ. ಹೌದು, ಬಂಗಲೆಯ ಹರಾಜು ಸೂಚನೆಯನ್ನು ‘ತಾಂತ್ರಿಕ ಕಾರಣಗಳಿಂದ’ ಹಿಂಪಡೆಯಲಾಗಿದೆ ಎಂದು ಸೋಮವಾರ ಆಗಸ್ಟ್ 21 ರಂದು ಬ್ಯಾಂಕ್ ಆಫ್ ಬರೋಡಾ ಪತ್ರಿಕೆಗಳಲ್ಲಿ ಮಾಹಿತಿ ನೀಡಿದೆ.

Font Awesome Icons

Leave a Reply

Your email address will not be published. Required fields are marked *