‘ಸಪ್ತ ಸಾಗರದಾಚೆ ಎಲ್ಲೋ’ ಪ್ರೀಮಿಯರ್‌ ಶೋ: ತಾರೆಯರು ಭಾವುಕ

ಬೆಂಗಳೂರು/ ಮಂಗಳೂರು: 2 ವರ್ಷಗಳ ಹಿಂದೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಅನೌನ್ಸ್‌ ಆಗಿತ್ತು. ಚಾರ್ಲಿ ನಂತರ ರಕ್ಷಿತ್‌ ಶೆಟ್ಟಿ ಅಭಿಮಾನಿಗಳು ಅವರ ಹೊಸ ಸಿನಿಮಾಗಾಗಿ ಕಾಯುತ್ತಿದ್ದರು. ಇತ್ತೀಚೆಗೆ ಘೋಷಣೆ ಆದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ ಚಾರ್ಲಿ 777 ಚಿತ್ರಕ್ಕೆ ಅತ್ಯುತ್ತಮ ಚಿತ್ರ ರಾಷ್ಟ್ರಪ್ರಶಸ್ತಿ ದೊರೆತಿದೆ. ಇದರ ಬೆನ್ನಲ್ಲೇ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ರಿಲೀಸ್‌ ಆಗುತ್ತಿರುವುದು ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ಡಬಲ್‌ ಖುಷಿ ನೀಡಿದೆ.

ಇನ್ನೂ ಈಗಂತೂ ಸಿನಿಮಾ, ಥಿಯೇಟರ್‌ನಲ್ಲಿ ರಿಲೀಸ್‌ ಆಗುವ ಮುನ್ನವೇ ಪ್ರೀಮಿಯರ್‌ ಶೋ ಆಯೋಜಿಸುವುದು ಟ್ರೆಂಡ್‌ ಆಗಿದೆ. ಇದೀಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತಂಡ ಕೂಡಾ ಪ್ರೀಮಿಯರ್‌ ಶೋ ಆ.31ರಂದು ಆಯೋಜಿಸಿತ್ತು.

ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಿಷಿ, ನಿರ್ದೇಶಕರಾದ ಸಿಂಪಲ್ ಸುನಿ, ಅನುಪ್ ಭಂಡಾರಿ ಸೇರಿದಂತೆ ಹಲವು ಮಂದಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ನೋಡಿ ಪ್ರಕ್ರಿಯೆ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೊಂದು ವಿಶಿಷ್ಠ ಪ್ರಯತ್ನ ಅನ್ನೋದನ್ನು ಇವರೆಲ್ಲೂ ಒಪ್ಪಿದ್ದಾರೆ.

ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಜೋಡಿ ಪ್ರೇಕ್ಷಕರನ್ನು, ತಾರೆಯರನ್ನು ಭಾವನಾಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ. ತಾರೆಯರಿಂದ ಉತ್ತಮ ರಿಯಾಕ್ಷಷನ್ ಸಿಕ್ಕಿದೆ.ಸಪ್ತಸಾಗರದಾಚೆ ಒಂದು ಕಾದಂಬರಿ ಓದಿದಂತೆ ಇತ್ತು. ಒಂದು ಕವಿತೆ ಓದಿದಂತೆ ಇತ್ತು” ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

“ಈ ಸಿನಿಮಾವನ್ನು ಒಂದು ಪೇಟಿಂಗ್ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂದು ಅನುಪ್ ಭಂಡಾರಿ ಹೇಳಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಒಂದು ನೀಲಿ ಸಮುದ್ರದಲ್ಲಿ ಎರಡು ಮೀನಿಗಳ ಕಥೆ ಅಂತಾನೇ ಹೇಳಬಹುದು. ತುಂಬಾ ಭಾವನಾತ್ಮಕವಾಗಿ ಪ್ಲ್ಯಾನ್ ಮಾಡಿ ಶೂಟ್ ಮಾಡಿದ್ದಾರೆ ಎಂದು ಸಿಂಪಲ್ ಸುನಿ ಹೇಳಿದ್ದಾರೆ.

ಆ್ಯಕ್ಟಿಂಗ್ ತುಂಬಾ ನ್ಯಾಚುರಲ್ ಆಗಿ ಮೂಡಿ ಬಂದಿದೆ. ಮುಂಗಾರು ಮಳೆ ಚಿತ್ರದ ಲವ್ ಸ್ಟೋರಿಯನ್ನು ನೆನಪಿಸಿತ್ತು ಅದ್ಬುತ ಚಿತ್ರ ಎಂದಿದ್ದಾರೆ ಗಾನ ಭಟ್. ಅದ್ಬುತವಾದ ಚಿತ್ರ, ಈ ಸಿನೆಮಾದಲ್ಲಿ ಮ್ಯೂಸಿಕ್ ಕನ್ನಡ ಚಿತ್ರರಂಗದಲ್ಲಿ ನೋಡಿಲ್ಲ, ಪ್ರತಿಯೊಂದು ಸೀನ್ ಕೂಡ ಹೊಸ ಪ್ರಪಂಚಕ್ಕೆ ಕರೆದೊಯ್ದಿದೆ ಎಂದಿದ್ದಾರೆ ನಟ ರಾಹುಲ್ ಅಮೀನ್.

ಮ್ಯೂಸಿಕ್, ಹಾಗು ಇಡೀ ಚಿತ್ರ ಬಹಳ ಅಚ್ಚುಕಟ್ಟಾಗಿ ‘ಕವಿತೆಯಂತೆ ಭಾವನೆಗಳ ಕದ ತಟ್ಟಿದೆ’.ಮತ್ತೊಂದು ಬಾರಿ ಸಿನೆಮಾ ನೋಡುವೆ ಎಂದಿದ್ದಾರೆ ನಟಿ ಚೈತ್ರಾ. ರಕ್ಷಿತ್ ಶೆಟ್ಟಿ ನಟನೆ,ಸೇರಿದಂತೆ ಎಲ್ಲಾ ಪಾತ್ರಗಳು ಒಳ್ಳೆಯ ಮೆಸೇಜ್ ಗಳನ್ನು ಕೊಟ್ಟಿದೆ. ಇಂತಹ ಲವ್ ಸ್ಟೋರಿ, ತುಂಬಾ ಕನೆಟ್ವೀವ್ ಆಗಿದೆ. ಇಲ್ಲಿ ಭಾವನೆಗಳನ್ನು ತೋರಿಸಿರುವ ರೀತಿ ಅದ್ಬುತವಾಗಿದೆ ಎಂದಿದ್ದಾರೆ ಪ್ರಕಾಶ್ ತೂಮಿನಾಡ್.

Font Awesome Icons

Leave a Reply

Your email address will not be published. Required fields are marked *