ಕಾಸರಗೋಡು: ಮಂಜೇಶ್ವರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ಸ್ಫೋಟಗೊಂಡಿದ್ದು, ಕಾರ್ಯಕರ್ತರ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿದ ದಿ.ಜ್ಯೋತಿಷ್ ಬೆಂಬಲಿಗರು ದಾಂದಲೇ ನಡೆಸಿದ್ದಾರೆ.
ಹಿಂದೂ ನಾಯಕ ದಿ.ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೂ ಬಿಜೆಪಿ ಸಭೆ ನಡೆಯಲು ಬಿಡಲ್ಲ ಎಂದಿದ್ದಾರೆ. ಜ್ಯೋತಿಷ್ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಹೇಳಿದ್ದರು. ಆದ್ರೆ ದಿ.ಜ್ಯೋತಿಷ್ ಸಾವಿನ ವಿಚಾರದಲ್ಲಿ ಒಂದು ತೀರ್ಮಾನ ಕೈಗೊಳ್ಳಲ್ಲದೇ ಬಿಜೆಪಿಯ ಯಾವ ಸಭೆಯನ್ನ ನಡೆಯಲು ಬಿಡೋದಿಲ್ಲ. ಕಾಸರಗೋಡಿನ ಬಿಜೆಪಿಯ ಕೆಲ ನಾಯಕರ ಷಡ್ಯಂತ್ರದಿಂದ ಜ್ಯೋತಿಷ್ ಸಾವಾಗಿದೆ. ಆರ್ ಎಸ್ ಎಸ್ ನ ಬಿ.ಟಿ. ವಿಜಯನ್, ವಿನೋದ್, ದಯಾನಂದ್ ಕೊಲೆ ಕೇಸಿನ ರೂವಾರಿ ಜೊತೆ ಬಿಜೆಪಿಯವರ ಸಂಪರ್ಕವಿದೆ.
ಸಿಪಿಎಂನ ಕೊಗ್ಗು ಜೊತೆ ಸೇರಿಕೊಂಡು ಬಿಜೆಪಿಗರು ನಾಲಾಯಕ್ ರಾಜಕಾರಣ ಮಾಡುತ್ತಿದ್ದಾರೆ. ಈ ಕೂಡಲೇ ಸ್ಥಳೀಯ ಬಿಜೆಪಿ ನಾಯಕರಾದ ಶ್ರೀಕಾಂತ್, ಸುರೇಶ್ ಶೆಟ್ಟಿ, ಮಣಿಕಂಠ ರೈಯನ್ನ ಬಿಜೆಪಿಯಿಂದ ಉಚ್ಛಾಟಿಸ ಬೇಕು.
ಈ ಮೂವರು ಬಿಜೆಪಿ ನಾಯಕರು ಸಿಪಿಎಂನ ಕೊಗ್ಗು ಜೊತೆ ಸೇರಿರುವುದೇ ಜ್ಯೋತಿಷ್ ಸಾವಿಗೆ ಕಾರಣ. ಜ್ಯೋತಿಷ್ ಸಾವಿಗೆ ನ್ಯಾಯ ಸಿಗೋವರೆಗೂ ನ ಬಿಜೆಪಿಗರ ಸಭೆ ನಡೆಯಲು ಕಾಸರಗೋಡು ಜಿಲ್ಲೆಯಲ್ಲಿ ಬಿಡಲ್ಲ ಎಂದು ಕಾಸರಗೋಡು ಬಿಜೆಪಿಗೆ ದಿ.ಜ್ಯೋತಿಷ್ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸಭೆ ನಡೆಯಬೇಕಾದ್ರೆ ಜ್ಯೋತಿಷ್ ಸಾವಿನ ವಿಚಾರದಲ್ಲಿ ತೀರ್ಮಾನ ಆಗ್ಬೇಕು. ಈ ತೀರ್ಮಾನ ಆಗೋವರೆಗೂ ಬಿಜೆಪಿಗೆ ಭಾರೀ ಹಿನ್ನಡೆ ಸಾಧ್ಯತೆಯಿದೆ.
ಹೀಗಾಗಿ ಕಾಸರಗೋಡು ಲೋಕಸಭಾ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿಗೆ ಆತಂಕ ಶುರುವಾಗಿದೆ. ಕಾಸರಗೋಡಿನಾದ್ಯಂತ ಅನೇಕ ಬೆಂಬಲಿಗರನ್ನು ದಿ.ಜ್ಯೋತಿಷ್ ಅಭಿಮಾನಿಗಳನ್ನು ಹೊಂದಿದ್ದೃು.
ಹೀಗಾಗಿ ಅಭಿಮಾನಿಗಳು ತಿರುಗಿಬಿದ್ದಲ್ಲಿ ಬಿಜೆಪಿಗೆ ಹಿನ್ನಡೆ ಖಚಿತವಾಗಿದೆ. 2022 ಫೆ.15 ರಂದು ಜ್ಯೋತಿಷ್ ಸಾವಾಗಿತ್ತು. ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡು ಪ್ರಬಲ ನಾಯಕನಾಗಿ ಮುನ್ನುಗ್ಗುತ್ತಿದ್ದರು ಜ್ಯೋತಿಷ್. ಕಾಸರಗೋಡು ಜಿಲ್ಲೆಯಲ್ಲೇ ಹಿಂದೂ ಹುಲಿ ಎಂದು ಜ್ಯೋತಿಷ್ ಗುರುತಿಸಿಕೊಂಡಿದ್ದರು.