ಸರ್ಕಾರಿ ನಿವಾಸ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಆರ್. ಅಶೋಕ್

ಬೆಂಗಳೂರು: ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರಿ ನಿವಾಸ ಒದಗಿಸುವಂತೆ ಮನವಿ ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬಿಜೆಪಿ ನಾಯಕ ಅಶೋಕ್ ಅವರು ವಿಧಾನಸಭೆ ವಿಪಕ್ಷ ನಾಯಕರಾಗಿ ಎರಡು ತಿಂಗಳು ಪೂರ್ಣಗೊಳ್ಳುತ್ತಿದೆ. ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿರುವ ಅಶೋಕ್, ಡಿಸಿಎಂ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ಮನೆಗಳನ್ನೆ ಕೇಳಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದಾರೆ. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ‌ ಶಿವಕುಮಾರ್​​ಗೆ ಹಂಚಿಕೆಯಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್​ನಲ್ಲಿ ನಂಬರ್ 1 ಮತ್ತು ನಂಬರ್ 3 ನಿವಾಸಕ್ಕೆ ಕೂಡಾ ಅಶೋಕ್ ಬೇಡಿಕೆ ಇಟ್ಟಿದ್ದಾರೆ. ಸದ್ಯ ರೇಸ್ ವ್ಯೂ ಕಾಟೇಜ್​​ನ ನಂಬರ್ 1 ನಿವಾಸ ಸಚಿವ ಎಂಬಿ ಪಾಟೀಲ್​​ಗೆ ಹಂಚಿಕೆಯಾಗಿದೆ. ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆಯಾಗಿದೆ.

ಸದ್ಯ ಜಯಮಹಲ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ಆಯ್ದುಕೊಳ್ಳುವಂತೆ ವಿಪಕ್ಷ ನಾಯಕರಿಗೆ ಸರ್ಕಾರ ಸಲಹೆ ನೀಡಿದೆ. ಆದರೆ, ಅದಕ್ಕೆ ಒಪ್ಪದ ಅಶೋಕ್ ನಿರ್ದಿಷ್ಟ ಮೂರು ಬಂಗಲೆಗಳ ಪೈಕಿ ಒಂದು ಬಂಗಲೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

Font Awesome Icons

Leave a Reply

Your email address will not be published. Required fields are marked *