ಸಿಎಂಗೆ ಹಾರ ಹಾಕುವ ವೇಳೆ ಸೊಂಟದಲ್ಲಿ ಗನ್‌ : ವ್ಯಕ್ತಿ ವಿಚಾರಣೆಗೊಳಪಡಿಸಿದ ಪೊಲೀಸರು. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ಏ.09, 2024 : (www.justkannada.in news )  ಸೊಂಟದಲ್ಲಿ ಗನ್‌ ಸಿಕ್ಕಿಸಿಕೊಂಡೇ ಸಿಎಂ  ಸಿದ್ದರಾಮಯ್ಯ ಅವರಿದ್ದ ವಾಹನ ಹತ್ತಿ, ಹಾರ ಹಾಕಿದ್ದ ಕಾಂಗ್ರೆಸ್‌ ಕಾರ್ಯಕರ್ತನ ವಿಚಾರಣೆ ನಡೆಸಿದ ಪೊಲೀಸರು.

ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು ಸಿದ್ದರಾಮಯ್ಯ ಅವರಿಗೆ ಹAರ ಹಾಕಿ ಅಭಿನಂಧಿಸಿದ್ದ. ಈ ದೃಶ್ಯ ವಿಷ್ಯುವಲ್‌ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ,ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವ್ಯಕ್ತಿ ಸೊಂಟದಲ್ಲಿ ಗನ್ ನೋಡಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ವ್ಯಕ್ತಿಯ ಪೂರ್ವಾಪರ ಪರಿಶೀಲಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಸಿದ್ದಾಪುರ ಪೊಲೀಸ್‌ ಠಾಣೆಗೆ ದೌಡಾಯಿಸಿದರು.

ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ. ಕಳೆದ 25 ವರ್ಷಗಳಿಂದಲೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾನೆ.

ಸಿಎಂ ಬಳಿ ಗನ್ ಇಟ್ಟುಕೊಂಡು ಹೋಗಿದ್ಯಾಕೆ ಎಂಬ ಆಯಾಮದಲ್ಲಿ ರಿಯಾಜ್‌ನ ವಿಚಾರಣೆ ನಡೆಸಲಾಯ್ತು. ಈ ವೇಳೆ ರಿಯಾಜ್ , ಹಿಂದೆ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ದೂರು ನೀಡಿದ್ದ ಬಗ್ಗೆ ಮಾಹಿತಿ ನೀಡಿ ಬಳಿಕ ತನಗೆ ಜೀವ ಬೆದರಿಕೆ ಇದೆ ಎಂದು ಮನವಿ ಮಾಡಿದ್ದ. ಅದರಂತೆ ಪರ್ಮಿಷನ್ ಪಡೆದು ಗನ್ ಪಡೆದುಕೊಂಡಿದ್ದ ಎಂಬುದು ತಿಳಿಯಿತು.  ಚುನಾವಣೆ ಸಂದರ್ಭದಲ್ಲೂ ಸಹ ಜೀವಭಯ  ಉಲ್ಲೇಖಿಸಿ ಗನ್‌ ಬಳಕೆಗೆ ಅನುಮತಿ ಪಡೆದಿದ್ದ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Key words : Congress worker,  garlanded,  with a gun in his waist,  questioned,  by the police.

ENGLISH SUMMARY :

A Congress worker had tied a gun to his waist and greeted Siddaramaiah. As soon as the video was reported on the visual media, the police woke up and later took him into custody and interrogated him.

The man saw a gun in his waist and created an atmosphere of anxiety for some time. As soon as the incident came to light, the police were alerted and checked the antecedents of the man. Additional Commissioner of Police Satish Kumar rushed to Siddapura police station

 

 

Font Awesome Icons

Leave a Reply

Your email address will not be published. Required fields are marked *