ಸಿಎಂ ಪಿಣರಾಯಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಕೇರಳ: ಕೇಂದ್ರ ಸಾರ್ಕಾರ ಇತ್ತೀಚೆಗೆ ಜಾರಿ ತಂದಿದ್ದ ಸಿಎಎ ಕುರಿತು ಹಲವಡೆ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌  ಜಾರಿ ಕುರಿತು ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪೌರತ್ವ ತಿದ್ದುಪಡಿ ಜಾರಿಯಿಂದಾಗಿ ಸಂವಿಧಾನದಲ್ಲಿ ತಿಳಿಸಲಾಗಿರುವ ಸಮಾನತೆ ಚೂರು ಚೂರಾಗಿದೆ ಎಂದಿದ್ದಾರೆ.

ಸಿಪಿಐ ಆಯೋಜನೆಯ ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಇವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಿದ್ಧಾಂತ ಹಾಗೂ ರಚನೆ ಅಡಾಲ್ಫ ಹಿಟ್ಲರ್‌ ಹಾಗೂ ಬೆನಿಟೊ ಮುಸೊಲಿನ ಅವರ ಪ್ಯಾಶಿಸಂನಿಂದ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಬಿಜೆಪಿ ಸರ್ಕಾರ ಜಾತ್ಯತೀತತೆಯನ್ನು ನಂಬುವುದಿಲ್ಲ ಎಂದರು.

ನಮ್ಮದು ಜಾತ್ಯತೀತ ರಾಷ್ಟ್ರ, ಆರ್‌ಎಸ್‌ಎಸ್‌ ಯಾವತ್ತೂ ಜಾತ್ಯತೀತತೆಯನ್ನು ಒಪ್ಪಿಕೊಂಡಿಲ್ಲ. ಭಾರತದಲ್ಲಿ ಜಾತ್ಯತೀತವನ್ನು ತೊಡೆದುಹಾಕಲು ಬಯಸುತ್ತದೆ. ಅವರು ನಮ್ಮನ್ನು ಶತ್ರುಗಳು ಎಂದು ಪರಿಹಣಿಸಸುತ್ತಾರೆ..ಧಾರ್ಮಿಕ ಅಲ್ಪಸಂಖ್ಯಾತರನ್ನು ಹಾಗೂ ಕಮ್ಯುನಿಸ್ಟ್‌ರನ್ನು ಆಂತರಿಕ ಶತ್ರುಗಳು ಎಂದು ಅವರು ಘೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *