ಸಿಎಂ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ: ತೆಂಗಿನಕಾಯಿ ಕಿಡಿ

ಹುಬ್ಬಳ್ಳಿ: ಸಿಎಂ ಅವರು ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಅಯೋಧ್ಯೆಯಲ್ಲಿ ಬಿಜೆಯವರು ಯಾರು ಕೆಲಸ ಮಾಡುತ್ತಿಲ್ಲ. ಇದನ್ನು ಸಿಎಂ ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ಅದರದೆ ಆದ ಟ್ರಸ್ಟ್ ಕಮಿಟಿ ಇದೆ, ಅಲ್ಲಿಯ ನಿರ್ಧಾರವನ್ನು ಕಮಿಟಿ ತೆಗೆದುಕೊಳ್ಳತ್ತದೆ. ಅಯೋಧ್ಯಯಲ್ಲಿ ಯಾವುದೇ ಪಕ್ಷದ ಹಸ್ತಕ್ಷೇಪ ಇರುವುದಿಲ್ಲ. ಈಗ ಶ್ರೀರಾಮನ ಮೂರ್ತಿ ಒಂದೇ ಸ್ಥಾಪನೆ ಆಗಿದೆ. ಮುಂದಿನ ದಿನಮಾನಗಳಲ್ಲಿ ಎನ್ನೇಲ ಮಾಡಬೇಕು ಅದರ ನಿರ್ಧಾರ ಕಮಿಟಿ ತೆಗೆದುಕೊಳ್ಳುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಟ್ಟಿದೆ. ಇನ್ನೂ ಮೂರ್ತಿ ಪ್ರತಿಷ್ಠಾಪನೆ ಕುರಿತು ಟ್ರಸ್ಟ್ ಕಮಿಟಿ ನಿರ್ಧಾರ ಕೈಗೊಳ್ಳುತ್ತದೆ. ಸಿಎಂ ಸಿದ್ದರಾಮಯ್ಯವರು ಇದರಲ್ಲಿ ರಾಜಕೀಯ ಬೆರೆಸುವ ಕೆಲಸ ಮಾಡಬಾರದು ಎಂದು ಅಗ್ರಹಿಸಿದರು.

ಶಿವಮೊಗ್ಗದ ಶ್ರೀರಾಮೋತ್ಸವದಲ್ಲಿ ಮಹಿಳೆ ಅಲಹು ಅಕ್ಬರ್ ಕೂಗಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡೀ ದೇಶ ಸೇರಿ ಜಗತ್ತಿನಲ್ಲಿ ಶಿವಮೊಗ್ಗದಂತಹ ಘಟನೆ ಎಲ್ಲಿಯು ನಡೆದಿಲ್ಲ.ಎಲ್ಲರೂ ಶ್ರೀರಾಮೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದ್ದಾರೆ.ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಖೇಧಕರವಾದ ಘಟನೆಯಾಗಿದೆ.ಆದರೆ ಇಂತಹ ಘಟನೆ ನಡೆದಾಗ್ಲೇಲ ಸರ್ಕಾರ ತನಿಖೆಯ ಮುಂಚೆ ಬಿ ರಿಪೋರ್ಟ್ ರೆಡಿ ಮಾಡಿರುತ್ತದೆ.ಅಲಾಹು ಅಕ್ಬರ್ ಅಂತಾ ಘೋಷಣೆ ಕೂಗಿದ ಮಹಿಳೆಗೆ ಈಗ ಮಾನಸಿಕ ಅಸ್ವಸ್ಥ ಮಹಿಳೆ ಎಂದಿದ್ದಾರೆ.ಅಲ್ಪ ಸಂಖ್ಯಾತರ ರಕ್ಷಣಾತ್ಮಕ ರೀತಿಯಲ್ಲಿ ನಡೆದುಕೊಳ್ಳುವುದು ಕಾಂಗ್ರೆಸ್ ಪ್ರವೃತ್ತಿಯಾಗಿದೆ.ಡಿಜೆ ಹಳ್ಳಿ, ಕೆಜೆ ಹಳ್ಳಿ ಜೊತೆಗೆ ಹುಬ್ಬಳ್ಳಿ ಗಲಭೆಯಲ್ಲಿ ಇದ್ದವರ ರಕ್ಷಣೆಗೆ ಈಗಾಗಲೇ ಮುಂದಾಗಿದ್ದಾರೆ. ಈಗ ಶಿವಮೊಗ್ಗ ಘಟನೆ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.

ಅಸ್ಸಾಂನಲ್ಲಿ ರಾಹುಲ್ ಗಾಂಧಿ ನ್ಯಾಯ ಯಾತ್ರೆಯಲ್ಲಿ ಮೋದಿ ಮೋದಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಸ್ಸಾಂನಲ್ಲಿಯ ರಾಹುಲ್ ಗಾಂಧಿಯ ಯಾತ್ರೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ, ಮಾಡಬಹುದು. ರಕ್ಷಣೆ ದೃಷ್ಠಿಯಿಂದ ಅಲ್ಲಿಯ ಸರ್ಕಾರ ತನ್ನ ಕರ್ತವ್ಯ ಮಾಡುತ್ತಿದೆ.ಇದರಲ್ಲಿ ಯಾವುದೇ ರಾಜಕೀಯ ಬೇರಿಸುವ ಕೆಲಸವಾಗಿಲ್ಲ.ಸಣ್ಣ ಸಣ್ಣ ಘಟನೆಗಳನ್ನು ದೊಡ್ಡದಾಗಿ ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಈಗ ಅಸ್ಸಾಂನಲ್ಲಿ ನಡೆದಿರುವ ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡುತ್ತಿದೆ‌ ಎಂದು ಟಾಂಗ್ ಮಾಡಿದರು.

Font Awesome Icons

Leave a Reply

Your email address will not be published. Required fields are marked *