ಕಲಬುರಗಿ: ಸಿಡಿಲು ಬಡೆದು ಯುವಕ ಮತ್ತು ಎರಡು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೇಡಂ ತಾಲೂಕಿನ ಮುಧೋಳ ವ್ಯಾಪ್ತಿಯ ಕಿಷ್ಟಪೂರ ಗ್ರಾಮದಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ.
ಕಿಷ್ಟಪುರ ಗ್ರಾಮದ ಶಾಂತಕುಮಾರ್ (30) ಮೃತಪಟ್ಟ ಯುವಕ. ಹತ್ತಿರದ ಹೋಲದಲ್ಲಿ ಕುರಿ ಕಾಯುವ ವೇಳೆ ಗಾಳಿ ಮಳೆ ಬರಲು ಶುರುವಾದಾಗ ಅಲ್ಲೇ ಇದ್ದ ಗಿಡದ ಕೇಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜೊತೆಗೆ ಎರಡು ಕುರಿಗಳು ಕೂಡ ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದಂತೆ ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪೋಲಿಸರು ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಈ ಕುರಿತು ಮುಧೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.