ಸುಚನಾ ಸೇಠ್ ಪ್ರಕರಣ: ಹರಿಶ್ಚಂದ್ರ ಫಾಟ್ ನಲ್ಲಿ ಮಗುವಿನ ಅಂತ್ಯಕ್ರಿಯೆ ನೆರವೇರಿಸಿದ ತಂದೆ

ಬೆಂಗಳೂರು: ಬೆಂಗಳೂರಿನ ಸ್ಟಾರ್ಟ್​ ಅಪ್ ಮಹಿಳಾ​ ಸಿಇಒ ಸುಚನಾ ತನ್ನ ಮಗನನ್ನು ಕೊಂದು ಸೂಟ್ ಕೇಸ್ ನಲ್ಲಿ ಸಾಗಿಸಿದ ಪ್ರಕರಣ, ಇದೀಗ ಈ ಮಗುವಿನ ಅಂತ್ಯಕ್ರಿಯೆ ಇಂದು ಹರಿಶ್ಚಂದ್ರ ಘಾಟ್​ನಲ್ಲಿ ನಡೆದಿದೆ. ಮಗುವಿನ ತಂದೆ ವೆಂಕಟರಮಣ ಮತ್ತು ಸಂಬಂಧಿಕರಿಂದ ವಿಧಿ ವಿಧಾನಗಳ ಮೂಲಕ ಕೊನೆಯ ಕಾರ್ಯ ಮಾಡಿದ್ದಾರೆ. ತಂದೆ ವೆಂಕಟರಮಣ ಕೈಯಾರೆ ಮಗುವನ್ನು ಹರಿಶ್ಚಂದ್ರ ಫಾಟ್​​ಗೆ ಕೊಂಡೊಯ್ದು ಅಂತಿಮ ವಿಧಾನ ನೆರವೇರಿಸಿ, ಕಣ್ಣೀರಿನ ಮೂಲಕ ವಿದಾಯ ಹೇಳಿದ್ದಾರೆ.

ಮಗುವಿನ ಮರಣೋತ್ತರ ಪರೀಕ್ಷೆಯ ಬಳಿಕ ಐಮಂಗಲ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ಮಗುವಿನ ಮೃತದೇಹ ರವಾನಿಸಲಾಗಿತ್ತು. ಮಧ್ಯರಾತ್ರಿ 1:45 ಕ್ಕೆ ಮಗುವಿನ ಮೃತದೇಹ ತಲುಪಿತ್ತು. ಯಶವಂತಪುರ ಬಳಿಇರುವ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಯಲ್ಲಿರುವ ತಂದೆ ವೆಂಕಟರಮಣ ನಿವಾಸವಿದ್ದು, ಮಗುವಿನ ತಂದೆ ಮತ್ತು ಕುಟುಂಬಸ್ಥರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *