ಸುದೀಪ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಕ್ಷಕ್

ಬೆಂಗಳೂರು:  ರಕ್ಷಕ್ ಅವರು ಬಿಗ್ ಬಾಸ್​ನಿಂದ ಹೊರಗೆ ಬಂದ ಬಳಿಕ ಸಾಕಷ್ಟು ಕಡೆಗಳಿಗೆ ಸಂದರ್ಶನ ನೀಡಿದ್ದರು. ಆದರೆ ಇದೀಗ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸುದೀಪ್ ಬಗ್ಗೆ ಅವರು ನಾಲಿಗೆ ಹರಿಬಿಟ್ಟಿದ್ದರು. ರಕ್ಷಕ್ ಕ್ಷಮೆ ಕೇಳಬೇಕು ಎಂದು ಸುದೀಪ್ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ರಕ್ಷಕ್ ಅವರು ಕ್ಷಮೆ ಕೇಳಿದ್ದು, ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ರಕ್ಷಕ್ ಅವರ ವಯಸ್ಸೇನು? ಸುದೀಪ್ ಅವರ ವಯಸ್ಸೇನು? ರಕ್ಷಕ್​ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡೋದು ಸರಿ ಅಲ್ಲ. ಅವರು ಬಹಿರಂಗ ಕ್ಷಮೆ ಕೇಳಬೇಕು’ ಎಂದು ಸುದೀಪ್ ಅಭಿಮಾನಿಗಳು ಒತ್ತಾಯಿಸಿದ್ದರು. ಈ ಕಾರಣಕ್ಕೆ ರಕ್ಷಕ್ ಅವರು ಕ್ಷಮೆ ಕೇಳಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಸುದೀಪಣ್ಣನ ಬಗ್ಗೆ ನೆಗೆಟಿವ್ ಆಗಿ ಮಾತಾಡಿದೆ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ. ಸಂದರ್ಶನವನ್ನು ಸಂಪೂರ್ಣವಾಗಿ ನೋಡಿದಾಗ ಆ ಮಾತು ಏಕೆ ಹೇಳಿದೆ ಎಂಬುದು ಗೊತ್ತಾಗುತ್ತಿತ್ತು. ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ರಕ್ಷಕ್ ಕ್ಷಮೆಯನ್ನು ಕೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.

 

https://www.instagram.com/p/C2M7ZG7PyTA/?utm_source=ig_embed&utm_campaign=embed_video_watch_again

Font Awesome Icons

Leave a Reply

Your email address will not be published. Required fields are marked *